ಮೂಡಿಗೆರೆ : ಕ್ರೀಡೆ ಮಾನಸಿಕ ಆರೋಗ್ಯಕ್ಕೆ ಸಹಕಾರಿ : ಧೀರಜ್ ಪ್ರಭು.

128
firstsuddi

ಕೊಟ್ಟಿಗೆಹಾರ : ಕ್ರೀಡೆಯಿಂದ ಮನುಷ್ಯನ ದೇಹದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ನಿಡುವಾಳೆ ಸಮೀಪದ ಕಲ್ಮನೆ ಕಾಫಿ ಎಸ್ಟೇಟ್ ಮಾಲಿಕರಾದ ಧೀರಜ್ ಪ್ರಭು ಹೇಳಿದರು.

ಚಂದುವಳ್ಳಿಯಲ್ಲಿ ಹಾವಳಿ ಪ್ರೆಂಡ್ಸ್ ವತಿಯಿಂದ ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಪ್ರತಿಭೆಗಳು ತಮ್ಮ ಆಸಕ್ತಿಯನ್ನು ಕ್ರೀಡೆಯಲ್ಲಿ ಬಳಸಿಕೊಂಡು ಆರೋಗ್ಯವಂತರಾಗಿ ಬದುಕಬೇಕು. ಇದರಿಂದ ಪ್ರತಿಭೆ ಬೆಳಗುವುದರ ಜೊತೆಗೆ ಭಾಗವಹಿಸುವಿಕೆಯು ಅತಿ ಮುಖ್ಯವಾಗುತ್ತದೆ ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಂಜಯ್ ಗೌಡ ಮಾತನಾಡಿ, ಹಾವಳಿ ಬ್ರದರ್ಸ್ ಹಾಗೂ ಪ್ರೆಂಡ್ಸ್ ತಂಡ ಪ್ರತಿ ವರ್ಷವೂ ಕ್ರಿಕೆಟ್ ಪಂದ್ಯಾವಳಿ ನಡೆಸಿ ಯುವಕರನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುತ್ತಿರುವುದು ನಿಜವಾಗಲೂ ಶ್ಲಾಘನೀಯ ಕಾರ್ಯವಾಗಿದೆ. ನೈಜ ಗ್ರಾಮೀಣ ಭಾಗದ ಕ್ರೀಡಾಪಟುಗಳು ಮೂಲೆ ಗುಂಪಾಗದೇ ಕ್ರೀಡೆಯಲ್ಲಿ ಮುಂದೆ ಬಂದು ದೇಶಕ್ಕೆ ಅದರಲ್ಲೂ ರಾಜ್ಯಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.

ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಪ್ರವೀಣ್ ಪೂಜಾರಿ ಮಾತನಾಡಿ ಸೋಲು ಗೆಲುವು ಯಾವುದೇ ಕ್ರೀಡಾಕೂಟದಲ್ಲಿ ಸರ್ವೆ ಸಾಮಾನ್ಯವಾಗಿದ್ದು , ಕ್ರೀಡೆಯಲ್ಲಿ ನಾವು ಭಾಗವಹಿಸುವುದೇ ಮುಖ್ಯವಾಗಿದೆ ಎಂದರು.

ಎರಡು ದಿನಗಳಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯುನೈಟೆಡ್ ಇಲವೆನ್ ಹೊಸಳ್ಳಿ ಪ್ರಥಮ ಬಹುಮಾನ ಹಾಗೂ ಟ್ರೋಪಿ ಪಡೆದುಕೊಂಡರು. ಗಬ್‍ಗಲ್ ಜಿವೈಸಿ ದ್ವಿತೀಯ ಬಹುಮಾನ ಹಾಗೂ ಟ್ರೋಪಿ ಪಡೆದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ತಾಲ್ಲೂಕು ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಬಣಕಲ್ ಗ್ರಾ.ಪಂ.ಸದಸ್ಯ ಮಧುಕುಮಾರ್, ಅಪ್ಪಣ್ಣಿ, ಸಂತೋಷ್‍ಸಾಲಿಯಾನ್,ಚಂದ್ರು, ನಿಡುವಾಳೆ ಗ್ರಾ.ಪಂ.ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಕ್ರಿಕೆಟ್ ಅಭಿಮಾನಿಗಳು ಇದ್ದರು.