ಉಕ್ರೇನ್ ಮೇಲೆ ರಷ್ಯಾ ಆಕ್ರಮಣ – ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಅಮೆರಿಕ.

72
firstsuddi

ವಾಷಿಂಗ್ಟನ್ : ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಉದ್ವಿಗ್ನತೆ ಹೆಚ್ಚುತ್ತಿದೆ. ಈಗಾಗಲೇ ರಷ್ಯಾದ ಸೈನ್ಯ ಉಕ್ರೇನ್ ನಲ್ಲಿದೆ. ಈ ಹಿನ್ನೆಲೆ ಅಮೆರಿಕ, ರಷ್ಯಾ ಮೇಲೆ ಹಲವು ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್ ಪ್ರದೇಶಗಳಲ್ಲಿ ರಷ್ಯಾ ಸೇನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇದು ರಷ್ಯಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮೀರಿದ್ದರಿಂದ ಆ ದೇಶದ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗುವುದು. ಇದಲ್ಲದೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಏನೆಲ್ಲಾ ನಿರ್ಬಂಧಗಳು?
ರಷ್ಯಾದ ಎರಡು ಬ್ಯಾಂಕ್ ಗಳಾದ ವೆಬ್ ಮತ್ತು ಮಿಲಿಟರಿ ಬ್ಯಾಂಕ್ ಮೇಲೆ ಅಮೆರಿಕದಲ್ಲಿ ಕಾರ್ಯನಿರ್ವಹಣೆಗೆ ತಡೆ ನೀಡಲಾಗಿದೆ. ಇನ್ನು ಮುಂದೆ ರಷ್ಯಾ, ಅಮೆರಿಕದಲ್ಲಿ ಹಣಕಾಸು ಹೂಡಿಕೆ ಮಾಡುವಂತಿಲ್ಲ. ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ರಷ್ಯಾ ವಹಿವಾಟಿಗೆ ತಡೆ ನೀಡಲಾಗಿದೆ. ರಷ್ಯಾದಿಂದ ಬರುವ ಎಲ್ಲ ಗಣ್ಯರು, ಅವರ ಕುಟುಂಬಸ್ಥರಿಗೆ ಅಮೆರಿಕ ಪ್ರವೇಶ ನಿರ್ಬಂಧ ಹೇರಿದೆ.

ಭಾರತೀಯ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್ ಇಂಡಿಯಾದ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಅದರಲ್ಲಿ ಮೊದಲ ವಿಮಾನ ನಿನ್ನೆ ರಾತ್ರಿ ಉಕ್ರೇನ್ನಿಂದ 241 ಭಾರತೀಯರನ್ನು ಹೊತ್ತು ತಂದಿದೆ.