ಉಕ್ರೇನ್‍ನಲ್ಲಿ ಸಿಲುಕಿರುವ ತುಮಕೂರಿನ ಅಕ್ಕ-ತಮ್ಮ – ಪೋಷಕರಲ್ಲಿ ಆತಂಕ…

74
firstsuddi

ತುಮಕೂರು : ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಭಯದ ವಾತಾವರಣ ನಿರ್ಮಿಸಿದೆ. ಉಕ್ರೇನ್ ನಲ್ಲಿ ಭಾರತೀಯರು ಸಿಲುಕಿದ್ದು, ಇತ್ತ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿಕೊಂಡವರಲ್ಲಿ ತುಮಕೂರಿನ ಅಕ್ಕ, ತಮ್ಮ ಕೂಡ ಇದ್ದಾರೆ.

ಅಕ್ಕ ರೂಪಶ್ರೀ ಹಾಗೂ ತಮ್ಮ ಸುಮಂತ್ ಉಕ್ರೇನ್ ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಕ್ರೇನ್ ನಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ವಿದ್ಯಾರ್ಥಿಗಳನ್ನು ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜ್ಯೋತಿ ಗಣೇಶ್ ಭರಸವೆ ನೀಡಿದರು.