ಮಾರ್ಚ್ 27ರಂದು ಬಿಡುಗಡೆಯಾಗಲಿದೆ ‘ಕೆಜಿಎಫ್ 2’ ಟ್ರೇಲರ್…

88
firstsuddi

ಯಶ್ ನಟನೆಯ ಕೆಜಿಎಫ್ 2 ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ.

ಈ ಕುರಿತು ‘ಹೊಂಬಾಳೆ ಫಿಲ್ಸ್ಮ್’ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ. ಇದೇ ಮಾರ್ಚ್ 27 ರಂದು ಸಂಜೆ 6.40ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ‘ಕೆಜಿಎಫ್ 2’ ಸಿನಿಮಾದಿಂದ ಈವರೆಗೆ ಬಿಡುಗಡೆ ಆಗಿರುವುದು ಕೆಲವು ಪೋಸ್ಟರ್ ಮತ್ತು ಒಂದೇ ಟೀಸರ್. ಮುಂದಿನ ಅಪ್ ಡೇಟ್ ಏನು ಎಂದು ತಿಳಿಯಲು ಅಭಿಮಾನಿಗಳಲ್ಲಿ ನಿರೀಕ್ಷೆ ಸೃಷ್ಟಿ ಆಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಕೆಜಿಎಫ್ 1 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಹಾಗಾಗಿ ಭಾಗ 2 ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.