ಬಾಹ್ಯಾಕಾಶ ರಾಕೆಟ್ ಮೇಲಿದ್ದ ವಿವಿಧ ದೇಶಗಳ ಧ್ವಜ ತೆಗೆದು ಹಾಕಿ ಭಾರತದ ಧ್ವಜ ಉಳಿಸಿಕೊಂಡ ರಷ್ಯಾ.

88
firstsuddi

ಮಾಸ್ಕೋ : ಉಕ್ರೇನ್ ನ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿಯನ್ನು ನಡೆಸುತ್ತಿದೆ. ರಷ್ಯಾ ಯುದ್ಧವನ್ನು ವಿರೋಧಿಸಿ ಅಮೆರಿಕ, ಬ್ರಿಟನ್ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಉಕ್ರೇನ್ ವಿರುದ್ಧದ ರಷ್ಯಾ ಹೋರಾಟದಲ್ಲಿ ಭಾರತ ಯಾವುದೇ ನಿರ್ಧಾರ ಕೈಗೊಳ್ಳದೇ ತಟಸ್ಥ ನಿಲುವು ಅನುಸರಿಸಿದ್ದು, ಇದಕ್ಕೆ ರಷ್ಯಾ ಮೆಚ್ಚುಗೆ ವ್ಯಕ್ತಪಡಿಸಿದೆ.

ರಷ್ಯಾ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತಪಡಿಸಿರುವ ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಯುಕೆ, ಯುಎಸ್, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾಗೆ ಅನೇಕ ನಿರ್ಬಂಧಗಳನ್ನು ವಿಧಿಸಿವೆ. ಇದರಿಂದ ಕೋಪಗೊಂಡಿರುವ ರಷ್ಯಾ ಇದೀಗ ಬಾಹ್ಯಾಕಾಶ ರಾಕೆಟ್ ಮೇಲಿದ್ದ ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳ ಧ್ವಜವನ್ನು ತೆಗೆದು ಹಾಕಿ ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ. ಅನೇಕ ರಾಷ್ಟ್ರಗಳ ಧ್ವಜಗಳನ್ನು ಅಳಿಸಿ ಹಾಕುತ್ತಿರುವ ಸಂಬಂಧದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬೈಕೊನೂರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬೃಹತ್ ರಾಕೆಟ್ ಮೇಲೆ ಹಲವು ರಾಷ್ಟ್ರಗಳ ರಾಷ್ಟ್ರೀಯ ಧ್ವಜವನ್ನು ಚಿತ್ರಿಸಲಾಗಿತ್ತು. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ರಷ್ಯಾ ಮತ್ತು ಇತರ ರಾಷ್ಟ್ರಗಳ ನಡುವಿನ ಸಂಬಂಧದ ಸಂಕೇತವಾಗಿತ್ತು.