ಕೀವ್, ಖಾರ್ಕೀವ್ ಸೇರಿ 4 ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದ ರಷ್ಯಾ.

59
firstsuddi

ಕೀವ್ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇಂದು 12ನೇ ದಿನವೂ ಮುಂದುವರಿದಿದ್ದು, ಎರಡನೇ ಬಾರಿಗೆ 4 ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ.

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30 ನಂತರ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಿದೆ. ಕೀವ್, ಮರಿಯುಪೋಲ್, ಖಾರ್ಕೀವ್, ಸುಮಿ ಪ್ರದೇಶಗಳಲ್ಲಿ ಸಿಲುಕಿರುವ ಇತರ ದೇಶಗಳ ಪ್ರಜೆಗಳನ್ನು ರಕ್ಷಿಸಲು ಮಾನವೀಯ ಕಾರಿಡಾರ್ ಗಳನ್ನು ತೆರೆಯುವ ಸಲುವಾಗಿ ಯುದ್ಧ ವಿರಾಮ ಘೋಷಿಸಿದ್ದಾಗಿ ರಷ್ಯಾ ಹೇಳಿದೆ.

ಕದನ ವಿರಾಮದ ಬಳಿಕ ಉಕ್ರೇನ್ ನ ಈ 4 ನಗರಗಳಲ್ಲಿ ರಷ್ಯಾ ಭಾರೀ ದಾಳಿ ನಡೆಸುವ ಸಾಧ್ಯತೆಯಿದೆ.