ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ಸಾವು!

57
firstsuddi

ಅಮರಾವತಿ : ಬೆಕ್ಕು ಕಚ್ಚಿದ್ದರಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವೇಮುಲವಾಡ ಗ್ರಾಮದಲ್ಲಿ ನಡೆದಿದೆ.

ಎರಡು ತಿಂಗಳ ಹಿಂದೆ ವೇಮುಲಮಾಡ ಗ್ರಾಮದಲ್ಲಿ ಕಮಲಾ ಮತ್ತು ನಾಗಮಣಿ ಎಂಬುವರಿಗೆ ಬೆಕ್ಕು ಕಚ್ಚಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಇಬ್ಬರು ಕೂಡ ಟಿಟಿ ಚುಚ್ಚುಮದ್ದು ತೆಗೆದುಕೊಂಡಿದ್ದರು. ಆದರೆ ಮಾ.4 ರಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಕಮಲಾ ಅವರನ್ನು ಮಂಗಳಗಿರಿಯ ಎನ್ ಆರ್ ಐ ಆಸ್ಪತ್ರೆಗೆ ಮತ್ತು ನಾಗಮಣಿ ಅವರನ್ನು ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೆಕ್ಕು ಕಚ್ಚಿದ ನಂತರ ಈ ಮಹಿಳೆಯರಿಗೆ ರೇಬಿಸ್ ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ.