ಉತ್ತರ ಪ್ರದೇಶ ಮತ್ತೆ ಬಿಜೆಪಿಗೆ, ಪಂಜಾಬ್‌ನಲ್ಲಿ ಆಪ್ – ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಬಹಿರಂಗ…

54
firstsuddi

ನವದೆಹಲಿ : ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಬಹಿರಂಗಗೊಂಡಿದೆ. ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ ಸಿಗಲಿದೆ ಎಂಬ ಬಗ್ಗೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಇನ್ನು, ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಗೋವಾ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಆದರೆ ಈ ಬಾರಿ ಆಡಳಿತರೂಢ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

ಉತ್ತರ ಪ್ರದೇಶ :
ಉತ್ತರ ಪ್ರದೇಶದಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿವೆ. 403 ಕ್ಷೇತ್ರಗಳ ಪೈಕಿ ಬಿಜೆಪಿಗೆ 262ರಿಂದ 277ರವರೆಗೆ ಸ್ಥಾನ ನೀಡಿದ್ದು, ಸಮಾಜವಾದಿ ಪಕ್ಷ 119ರಿಂದ 134 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿವೆ.

ಇಂಡಿಯಾ ಟುಡೇ:
ಬಿಜೆಪಿ 288-326, ಎಸ್‍ಪಿ+ 71-101, ಬಿಎಸ್‌ಪಿ 03-09, ಕಾಂಗ್ರೆಸ್‌ 01-03 ಇತರರು 2-3

ರಿಪಬ್ಲಿಕ್:
ಬಿಜೆಪಿ 262-277, ಎಸ್‌ಪಿ + 119-134, ಬಿಎಸ್‌ಪಿ 7-15, ಕಾಂಗ್ರೆಸ್‌ 3-08, ಇತರರು 00

ಟೈಮ್ಸ್ ನೌ:
ಬಿಜಪಿ 225, ಎಸ್‌ಪಿ 151, ಬಿಎಸ್‌ಪಿ 14, ಕಾಂಗ್ರೆಸ್‌ 04, ಇತರರು 00

ಪಂಜಾಬ್ :
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಲಿದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ಹೇಳಿವೆ. ಎಎಪಿ 117 ಕ್ಷೇತ್ರಗಳ ಪೈಕಿ 70-75 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 27-33 ಸ್ಥಾನ ಜಯ ಸಾಧಿಸಲಿದೆ ಎಂದು ಅಂಕಿಅಂಶಗಳನ್ನು ಹೊರಹಾಕಿವೆ.

ಇಂಡಿಯಾ ಟುಡೇ:
ಆಪ್‌ 76-90, ಕಾಂಗ್ರೆಸ್‌ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01

ರಿಪಬ್ಲಿಕ್‌:
ಆಪ್‌ 62-70, ಕಾಂಗ್ರೆಸ್‌ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3

ಟೈಮ್ಸ್‌ ನೌ:
ಆಪ್‌ 70, ಕಾಂಗ್ರೆಸ್‌ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1

ಗೋವಾ:

ಇಂಡಿಯಾ ಟುಡೇ
ಬಿಜೆಪಿ 14-18, ಕಾಂಗ್ರೆಸ್‌+ 15-20, ಆಪ್‌ – 0, ಟಿಎಂಸಿ 2-5, ಇತರರು 0-4

ರಿಪಬ್ಲಿಕ್‌
ಬಿಜೆಪಿ 13-17, ಕಾಂಗ್ರೆಸ್‌+ 13-17, ಆಪ್‌ 2-6, ಟಿಎಂಸಿ 2-4, ಇತರರು 0-4

ಟೈಮ್ಸ್‌ ನೌ
ಬಿಜೆಪಿ 14, ಕಾಂಗ್ರೆಸ್‌+ 16, ಆಪ್‌ 0, ಟಿಎಂಸಿ 0, ಇತರರು 10

ಉತ್ತರಾಖಂಡ:

ಇಂಡಿಯಾ ಟುಡೇ
ಬಿಜೆಪಿ + 41, ಕಾಂಗ್ರೆಸ್‌ 25, ಆಪ್ 0, ಬಿಎಸ್‌ಪಿ 3, ಇತರರು 4

ರಿಪಬ್ಲಿಕ್‌
ಬಿಜೆಪಿ+ 35-39, ಕಾಂಗ್ರೆಸ್‌ 28-24, ಆಪ್‌ 0-3, ಬಿಎಸ್‌ಪಿ 0, ಇತರರು 0

ಟೈಮ್ಸ್‌ ನೌ
ಬಿಜೆಪಿ+ 37, ಕಾಂಗ್ರೆಸ್‌ 31, ಆಪ್‌ 01, ಬಿಎಸ್‌ಪಿ, ಇತರರು 0

ಮಣಿಪುರ :

ಇಂಡಿಯಾ ಟುಡೇ
ಬಿಜೆಪಿ 33-43, ಕಾಂಗ್ರೆಸ್‌ 4-8, ಎನ್‌ಪಿಎಫ್‌ 0, ಎನ್‌ಪಿಪಿ 4-8, ಇತರರು 6-15

ರಿಪಬ್ಲಿಕ್‌
ಬಿಜೆಪಿ 27-31, ಕಾಂಗ್ರೆಸ್‌ 11-17, ಎನ್‌ಪಿಎಫ್‌ 6-10, ಎನ್‌ಪಿಪಿ 2-6, ಇತರರು 3-7

ಟೈಮ್ಸ್‌ ನೌ
ಬಿಜೆಪಿ 32-38, ಕಾಂಗ್ರೆಸ್‌ 12-17, ಎನ್‌ಪಿಎಫ್‌ 3-5, ಎನ್‌ಪಿಪಿ 2-5, ಇತರರು 0