ಯುಪಿ ಚುನಾವಣಾ ಫಲಿತಾಂಶ ಬಿಎಸ್‌ಪಿ ನಿರೀಕ್ಷೆಗಳಿಗೆ ವಿರುದ್ಧವಾಗಿವೆ : ಮಾಯಾವತಿ.

65
firstsuddi

ಲಕ್ನೋ : ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳು ಬಿಎಸ್‌ಪಿಯ ನಿರೀಕ್ಷೆಗಳಿಗೆ ವಿರುದ್ಧವಾಗಿವೆ. ಅದಕ್ಕೆ ನಾವು ಎದೆಗುಂದಬಾರದು. ಬದಲಾಗಿ ನಾವು ಅದರಿಂದ ಪಾಠ ಕಲಿಯಬೇಕು, ನಮ್ಮ ಪಕ್ಷದ ಚಳವಳಿಯನ್ನು ಮುಂದುವರಿಸಬೇಕು ಮತ್ತು ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಲ್ಲಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿರುವ ಬಹುಜನ ಸಮಾಜ ಪಕ್ಷವು ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಮಾಯಾವತಿ, 2017ಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶಗಳು ಸಿಕ್ಕಿರಲಿಲ್ಲ. ಇಂದು ಕಾಂಗ್ರೆಸ್ ಕೂಡ ಬಿಜೆಪಿಯಂತೆಯೇ ಅದೇ ಹಂತಕ್ಕೆ ಹೋಗುತ್ತಿದೆ. ಉತ್ತರಪ್ರದೇಶದ ಚುನಾವಣಾ ಫಲಿತಾಂಶವು ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಪಾಠವಾಗಿದೆ ಎಂದಿದ್ದಾರೆ.

ನಕಾರಾತ್ಮಕ ಪ್ರಚಾರಗಳು ಮತದಾರರ ದಾರಿತಪ್ಪಿಸುವಲ್ಲಿ ಯಶಸ್ವಿಯಾಗಿವೆ. ಅಂತೆಯೇ ಬಿಎಸ್‌ಪಿ ಬಿಜೆಪಿಯ ಬಿ-ಟೀಮ್ ಎಂಬುದು ಸತ್ಯ ಇದಕ್ಕೆ ವಿರುದ್ಧವಾಗಿದೆ, ಬಿಜೆಪಿ ಮತ್ತು ಬಿಎಸ್ ಪಿ ಯುದ್ಧವು ರಾಜಕೀಯ ಮಾತ್ರವಲ್ಲ, ತಾತ್ವಿಕ ಮತ್ತು ಚುನಾವಣೆಯೂ ಆಗಿತ್ತು ಎಂದು ಮಾಯಾವತಿ ಹೇಳಿದ್ದಾರೆ.