ಭಾರತದ ರಫೇಲ್ ಎದುರಿಸಲು ಚೀನಾದ ಫೈಟರ್ ಜೆಟ್ ಖರೀದಿ ಮಾಡಿದ ಪಾಕ್.

94
firstsuddi

ಇಸ್ಲಾಮಾಬಾದ್ : ಭಾರತದ ಬಲಿಷ್ಠ ರಫೇಲ್ ಯುದ್ಧ ವಿಮಾನ ಎದುರಿಸಲು ಪಾಕಿಸ್ತಾನ ಇದೀಗ ಚೀನಾ ತಯಾರಿಸಿರುವ ಜೆ-10ಸಿ ಫೈಟರ್ ಜೆಟ್ ಖರೀದಿ ಮಾಡಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಚೀನಾದ 25 ಜೆ-10ಸಿ ಫೈಟರ್ ಜೆಟ್ ಖರೀದಿಗೆ ಸಹಿ ಹಾಕಿದ್ದರು. ಇದೀಗ ಎಲ್ಲ ಫೈಟರ್ ಜೆಟ್ ಗಳು ಪಾಕಿಸ್ತಾನದ ವಾಯುಪಡೆ ಸೇರಿಕೊಂಡಿವೆ.

ನಿನ್ನೆ ಚೀನಾದಿಂದ ತರಿಸಿಕೊಂಡಿರುವ ಫೈಟರ್ ಜೆಟ್ ಗಳನ್ನು ಪಾಕಿಸ್ತಾನದ ವಾಯುಪಡೆಗೆ ಸೇರ್ಪಡೆಗೊಳಿಸುವ ಸಲುವಾಗಿ ಪಂಜಾಬ್ ಅಟಾಕ್ ಜಿಲ್ಲೆಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚೀನಾದ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದೇ ವೇಳೆ ಪರೋಕ್ಷವಾಗಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ ಇಮ್ರಾನ್ ಖಾನ್, ಯಾವುದೇ ದೇಶ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವ ಮೊದಲು ಎರಡು ಸಲ ಯೋಚನೆ ಮಾಡಬೇಕು. ನಮ್ಮ ಸಶಸ್ತ್ರ ಪಡೆಗಳು ಯಾವುದೇ ರೀತಿಯ ಬೆದರಿಕೆ ಎದುರಿಸಲು ಸುಸಜ್ಜಿತವಾಗಿದ್ದು, ಅದಕ್ಕಾಗಿ ತರಬೇತಿ ಪಡೆದುಕೊಂಡಿವೆ ಎಂದರು.