ಮೆಲಿಟೊಪೋಲ್ ​ನಗರದ ಮೇಯರ್ ನನ್ನು ಅಪಹರಿಸಿದ ರಷ್ಯಾ ಸೇನೆ.

118
firstsuddi

ಕೀವ್ : ಉಕ್ರೇನ್ ದಕ್ಷಿಣ ನಗರ ಮೆಲಿಟೊಪೋಲ್ ನ ಮೇಯರ್ ರನ್ನು ರಷ್ಯಾದ ಸೈನಿಕರು ಅಪರಹಣ ಮಾಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಆರೋಪಿಸಿದ್ದಾರೆ.

ರಷ್ಯಾದ ಒಟ್ಟು 10 ಆಕ್ರಮಣಕಾರರು ಮೆಲಿಟೊಪೋಲ್ ನ ಮೇಯರ್ ಇವಾನ್ ಫೆಡೋರೊವ್ ರನ್ನು ಕಿಡ್ನ್ಯಾಪ್ ಮಾಡಿದ್ದಾಗಿ ಉಕ್ರೇನ್ನ ಸಂಸತ್ತು ಕೂಡ ಟ್ವೀಟ್ ಮಾಡಿ ತಿಳಿಸಿದೆ.

ನಿನ್ನೆ ತಡರಾತ್ರಿ ವೀಡಿಯೋ ಸಂದೇಶವೊಂದರಲ್ಲಿ ಝೆಲೆನ್ಸ್ಕಿ ಮೇಯರ್ ಅಪಹರಣವಾಗಿದ್ದನ್ನು ಖಚಿತಪಡಿಸಿದ್ದಾರೆ. ಫೆಡೊರೊವ್ ಒಬ್ಬ ಧೈರ್ಯಶಾಲಿ ಮೇಯರ್. ಅವರು ರಷ್ಯಾ ಆಕ್ರಮಣಕಾರರಿಂದ ಉಕ್ರೇನ್ ನನ್ನು ಮತ್ತು ತನ್ನ ಸಮುದಾಯವನ್ನು ರಕ್ಷಿಸಿಕೊಳ್ಳಲು ಹೋರಾಡಿದರು. ಆದರೆ ಸೈನಿಕರು ಅವರನ್ನೇ ಕಿಡ್ನ್ಯಾಪ್ ಮಾಡಿದ್ದಾರೆ. ಇದು ರಷ್ಯಾ ಸೈನಿಕರ ದುರ್ಬಲತೆಯನ್ನು ತೋರುತ್ತದೆ. ಅವರು ಕಾನೂನುಬದ್ಧ ಸ್ಥಳೀಯ ಉಕ್ರೇನಿಯನ್ ಅಧಿಕಾರಿಗಳ ಪ್ರತಿನಿಧಿಗಳನ್ನು ಹಿಂಸಿಸುವ ಪ್ರಯತ್ನಿಸುತ್ತಿರುವ ಭಯೋತ್ಪಾದನೆಯ ಹೊಸ ಹಂತಕ್ಕೆ ತಲುಪಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.