ಮೂಡಿಗೆರೆ : ಬಿಸಿ ರಕ್ತ ಇದ್ದಾಗ ಉತ್ಸಾಹದಿಂದ ಕೆಲಸಮಾಡಲು ಸಾಧ್ಯ, ವಯಸ್ಸಾಗುತ್ತಾ ಬಂದಹಾಗೆ ರಕ್ತದ ಬಿಸಿ ಕಡಿಮೆಯಾದಾಗ ವಿಶ್ರಾಂತಿ ಜೀವನ ಅಗತ್ಯವಿರುವುದರಿಂದ ವಯಸ್ಸು 60 ಆಗುತ್ತಿದ್ದಂತೆ ನಿವೃತ್ತಿ ಅನಿವಾರ್ಯವಾಗುತ್ತದೆ ಎಂದು ಮೂಡಿಗೆರೆ ಭಾರತೀಯ ಜೀವವಿಮಾ ನಿಗಮದ ಶಾಖಾಧಿಕಾರಿ ಸೋಮನಾಯ್ಕ್ ಅಭಿಪ್ರಾಯಪಟ್ಟರು.
ಪಟ್ಟಣದ ಚರ್ಚ್ ಹಾಲ್ ನಲ್ಲಿ ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ದಿ ಅಧಿಕಾರಿಯಾಗಿ 37 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆಗೆ ಪಾತ್ರರಾದ ಜೆ.ಎನ್.ಜೆ ಲೋಭೊ ಅವರಿಗೆ ಅಭಿನಂದಿಸಿ ಸನ್ಮಾನಿಸಿ ಮಾತನಾಡಿದ ಅವರು, ಲೋಭೋ ಅವರು ಉತ್ತಮ ಮಾರ್ಗದರ್ಶಕರಾಗಿದ್ದು ಇನ್ನು ಯುವಕರಂತೆ ಓಡಾಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಅವರನ್ನು ನೋಡಿ ಕಲಿಯಬೇಕಾಗಿದ್ದು ಸಾಕಷ್ಟಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಣಿಗೆಯ ಜೆ.ಸಿ.ಶೇಖರ್ ವಹಿಸಿದ್ದರು. ಉಪಶಾಖಾಧಿಕಾರಿ ಪ್ರಸಾದ್, ಮಂಗಳೂರು ಬ್ಯಾಂಕಿಗ್ ಇನ್ಯೂರನ್ಸ್ ಅಧಿಕಾರಿ ಶ್ರಿಪಾದ ಭಟ್, ಶಿವಕುಮಾರ್, ಗೋಪಾಲ್‍ಗೌಡ, ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.










