ಚಂಡೀಗಢ : ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭಗತ್ ಸಿಂಗ್ ಅವರ ಪುಣ್ಯತಿಥಿಯಂದು ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಿದ್ದಾರೆ.
ಭಗತ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಜನರು ಅವರ ಹುಟ್ಟೂರು ಖಟ್ಕರ್ ಕಲಾನ್ ಗೆ ತೆರಳಿ ನಮನ ಸಲ್ಲಿಸಲು ಅನುಕೂಲವಾಗಲು ರಜೆ ಘೋಷಿಸಲಾಗಿದೆ. ಪ್ರತಿ ವರ್ಷ ಮಾರ್ಚ್ 23 ರಂದು ಸಾರ್ವಜನಿಕ ರಜೆ ನೀಡಲಾಗುವುದು ಎಂದು ವಿಧಾನ ಸಭೆಯಲ್ಲಿ ಭಗವಂತ್ ಮಾನ್ ತಿಳಿಸಿದ್ದಾರೆ.










