ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸುವ ನೈತಿಕತೆ ಮುಸ್ಲಿಮರಿಗೆಲ್ಲಿದೆ? : ಸಿ.ಟಿ.ರವಿ.

108
firstsuddi

ಚಿಕ್ಕಮಗಳೂರು : ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸುವ ನೈತಿಕತೆ ಮುಸ್ಲಿಮರಿಗೆಲ್ಲಿದೆ?, ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ ಖರೀದಿ ಮಾಡುತ್ತಾರಾ?. ಅದು ನಮ್ಮ ದೇವರಿಗೆ ಆಗುವುದಿಲ್ಲ ಎನ್ನುತ್ತಾರೆ. ಹಾಗಾದರೆ ಅವರ ದೇವರಿಗೆ ಒಪ್ಪಿಸದ್ದನ್ನು ನಮ್ಮ ದೇವರು ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಉದಾರತೆ ಪಾಠವನ್ನು ಯಾರೂ ಹೇಳಬೇಕಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಉಡುಪಿಯ ಗಂಗೊಳ್ಳಿ ಸುತ್ತಮುತ್ತ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸಬಾರದು ಎಂದು ಫರ್ಮಾನು ಹೊರಡಿಸಿದರು. ಅದಕ್ಕೆ ಪ್ರತಿ ಕ್ರಿಯೆಯಾಗಿ ಇದು ಬಂದಿದೆ. ಜಾತ್ಯತೀತತೆ, ಉದಾರತೆ ಎಲ್ಲವೂ ಬಹುಸಂಖ್ಯಾತ ಹಿಂದೂಗಳಿಗೆ ಮೋಸ ಮಾಡಲೆಂದೇ ಇಟ್ಟಿರುವ ಪದಗಳು. ಸಮಾನತೆ ಇಬ್ಬರಿಗೂ ಒಂದೇ ಇರಬೇಕು. ಏಕಪಕ್ಷೀಯವಾಗಿರಬಾರದು ಎಂದರು.

ಮಹಾತ್ಮಗಾಂಧಿ ಅವರು ಹಿಂದೂಗಳ ಭಜನೆಯಲ್ಲಿ ಈಶ್ವರ ಅಲ್ಲಾ ತೇರೇನಾಮ್ ಎಂದು ಹೇಳಿದ್ದರು. ಇದನ್ನು ನಾವು ಎಲ್ಲ ಕಡೆ ಸಂಕೋಚ ಇಲ್ಲದೇ ಹೇಳುತ್ತೇವೆ. ಆದರೆ, ಯಾವುದಾದರೂ ಒಂದು ಮಸೀದಿಯಲ್ಲಿ ಈಶ್ವರ ಅಲ್ಲಾ ತೇರೇ ನಾಮ್ ಎಂದು ಹೇಳಿದ್ದನ್ನು ಕೇಳಿದ್ದೀರಾ ಎಂದರು. ಒಬ್ಬ ಮೌಲ್ವಿ, ಮುತಾವಲ್ಲಿ, ಮುಸ್ಲಿಂ ಧರ್ಮಗುರು ದೇವನೊಬ್ಬ ನಾಮ ಹಲವು ಎಂದು ಹೇಳಿದ್ದನ್ನು ಕೇಳಿದ್ದೀರಾ?. ಅವರು ಬಹುತ್ವವನ್ನು ಒಪ್ಪಿಕೊಳ್ಳದ ಮೇಲೆ ನಮಗೇಕೆ ಮೋಸ ಮಾಡಬೇಕು ಎಂದು ಪ್ರಶ್ನಿಸಿದರು.

ಇಸ್ಲಾಂನಲ್ಲಿ ಜಾತ್ಯತೀತ ಪದಕ್ಕೆ ಅರ್ಥವಿದೆಯೇ?. ಹಾಗಿದ್ದರೆ ಅವರು ಪ್ರತಿದಿನ ನಮಾಜ್ ನಲ್ಲಿ ಅಲ್ಲಾ ಒಬ್ಬನೇ ದೇವರು ಎಂದು ಕೂಗುವುದೇಕೆ?. ಈಶ್ವರ, ಕೃಷ್ಣ, ರಾಮ ಹುಟ್ಟಿದ ಜಾಗದಲ್ಲಿ ಇದನ್ನು ಕೂಗುತ್ತಾರೆ. ಅದನ್ನು ಕೇಳಿಸಿಕೊಂಡು ಸುಮ್ಮನಿರಬೇಕು. ಅವರು ಮಾತ್ರ ಕೋಮುವಾದಿಗಳಾಗಿರಬೇಕು. ಹಿಂದೂಗಳು ಮಾತ್ರ ಜಾತ್ಯತೀತರಾಗಿಬೇಕೆ ಎಂದರು. ಮುಸ್ಲಿಮರು ಮಾತ್ರ ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬಾರದು. ಹಿಂದೂಗಳೆಲ್ಲರೂ ಅವರ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಕೆ?, ಇದು ಕೊಡು ಕೊಳ್ಳುವ ನೀತಿ. ಏಕ ಪಕ್ಷೀಯವಲ್ಲ. ಅವರು ಬೇಲಿ ಹಾಕಿಕೊಂಡು ಇನ್ನೊಬ್ಬರ ಬುಟ್ಟಿಗೆ ಮಾತ್ರ ಕೈ ಹಾಕಲು ಬರುವುದಿಲ್ಲ. ನಮ್ಮ ಮೂಲ ನಂಬಿಕೆಯಲ್ಲೇ ದೇವನೊಬ್ಬ ನಾಮ ಹಲವು ಎಂದಿದೆ. ಇದು ಇಸ್ಲಾಂನಲ್ಲಿ ಇದೆಯಾ?. ಅದಿದ್ದರೆ ಜಗಳವೇ ಇರುವುದಿಲ್ಲವಲ್ಲ ಎಂದರು.