ಕರ್ತವ್ಯ ಲೋಪ : ಮಂಡ್ಯ ತಹಶೀಲ್ದಾರ್ ಅಮಾನತು…

71
firstsuddi

ಮಂಡ್ಯ : ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮಂಡ್ಯ ತಹಶೀಲ್ದಾರ್ ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಲಂಚಕ್ಕೆ ಬೇಡಿಕೆ, ನಿಯಮ ಉಲ್ಲಂಘಿಸಿ ಮಗನ ಬರ್ತ್ ಡೇ ಆಚರಣೆ, ಅಕ್ಕಿ ಮೂಟೆಗಳ ನಾಪತ್ತೆ, ಕರ್ತವ್ಯ ಲೋಪ ಸೇರಿ 13 ಕಾರಣ ನೀಡಿ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಅವರನ್ನ ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಸ್.ರಶ್ಮಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ತಹಶೀಲ್ದಾರ್ ಅಮಾನತಿಗೆ ಕಾರಣವೇನು?
ಕೋವಿಡ್ ಮೂರನೇ ಅಲೆ ವೇಳೆ ಮಗನ ಜನ್ಮದಿನ ಆಚರಿಸಿ ನಿಯಮ ಉಲ್ಲಂಘನೆ, ನಿವೇಶನ ಹಂಚಿಕೆಗೆ ಲಂಚ ಬೇಡಿಕೆ, ಸೀಜ್ ಆಗಿದ್ದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ದೂರು ಕೊಡಲು ತಕ್ಷಣ ಕ್ರಮವಹಿಸದೆ ಇರುವುದು, ಚೆಸ್ಕಾಂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ಧಗಳಿಂದ ಚೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಗೆ ನಿಂದನೆ ಆರೋಪ, ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ ಮನಬಂದಂತೆ ರಜೆ ಹಾಕಿರುವುದು. ಕಚೇರಿ ನಿರ್ವಹಣೆಯಲ್ಲಿ ಕೆಲವು ಲೋಪ ಸೇರಿದಂತೆ 13 ಕಾರಣ ನೀಡಿ ಅಮಾನತು ಮಾಡಲಾಗಿದೆ.