ಉರ್ದು ಮಾತನಾಡಲು ಬರದಿದ್ದಕ್ಕೆ ಚಂದ್ರು ಕೊಲೆ ನಡೆದಿದೆ : ಆರಗ ಜ್ಞಾನೇಂದ್ರ.

64
firstsuddi

ಬೆಂಗಳೂರು : ಚಂದ್ರು ಕೊಲೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಉರ್ದು ಮಾತಾಡಲು ಬರಲಿಲ್ಲವೆಂದು ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕ ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆತ ಚಿಕನ್ ಖರೀದಿ ಮಾಡಲು ಹೋದಾಗ ಅಂಗಡಿಯವರು ಉರ್ದು ಮಾತನಾಡುವಂತೆ ಹೇಳಿದ್ದಾರೆ. ಆದರೆ ಚಂದ್ರುವಿಗೆ ಉರ್ದು ಮಾತಾಡಲು ಬರಲಿಲ್ಲ. ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚೂರಿಯಿಂದ ಚುಚ್ಚಿ-ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಕೆಲವರ ಬಂಧನ ಆಗಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು
ಹೇಳಿದ್ದಾರೆ.

ಏನಿದು ಪ್ರಕರಣ?
ಐಟಿಐ ಪದವೀಧರನಾಗಿರುವ ಚಂದ್ರು ರೈಲ್ವೆ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಫಿಟ್ಟರ್ ಕೆಲಸ ಮಾಡಿಕೊಂಡಿದ್ದ. ಸೋಮವಾರ ತನ್ನ ಸ್ನೇಹಿತ ಸೈಮನ್ ಹುಟ್ಟು ಹಬ್ಬವಿತ್ತು. ಹೀಗಾಗಿ ಬೈಕ್ ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು ಛಲವಾದಿ ಪಾಳ್ಯದ ಪಕ್ಕದಲ್ಲೇ ಇರುವ ಜೆಜೆ ನಗರಕ್ಕೆ ಬಂದಿದ್ದಾರೆ. ಈ ವೇಳೆ, ಅಪರಿಚಿತರ ಯುವಕರ ಬೈಕ್ ಗೆ ಚಂದ್ರುವಿನ ಬೈಕ್ ಟಚ್ ಆಗಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾತಿಗೆ ಮಾತು ಬೆಳೆದು, ನಾಲ್ವರಲ್ಲಿ ಒಬ್ಬ ಏಕಾಏಕಿ ಹರಿತವಾದ ಚಾಕುವಿನಿಂದ ಚಂದ್ರುವಿಗೆ ಚುಚ್ಚಿದ್ದಾನೆ. ನಂತರ ಸೈಮನ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ನಿನ್ನೆ ಬೆಳಗಿನ ಜಾವ ಎರಡೂವರೆ ಗಂಟೆಗೆ ಈ ಘಟನೆ ನಡೆದಿದ್ದು, ಬಳಿಕ ಮೂರುವರೆ ಗಂಟೆಗೆ ಆಟೋದಲ್ಲಿ ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು .ಆದರೆ, ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆ ಬಗ್ಗೆ ಪೊಲೀಸರು ಮುಂಜಾನೆ 4-30ಕ್ಕೆ ಪ್ರಕರಣ ದಾಖಲಿಸಿ, ಕೆಲವೇ ಗಂಟೆಗಳಲ್ಲಿ  ಶಾಹಿದ್ ಎಂಬ ಒಂದೇ ಹೆಸರಿನ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.