ಎಸ್‍ಪಿ ಶಾಸಕ ಒಡೆತನದ ಪೆಟ್ರೋಲ್ ಪಂಪ್ ಧ್ವಂಸಗೊಳಿಸಿದ ಜಿಲ್ಲಾಡಳಿತ…

79
firstsuddi

ಲಕ್ನೋ : ಉತ್ತರ ಪ್ರದೇಶದ ಬರೇಲಿಯ ದೆಹಲಿ-ರಾಮ್ಪುರ ಹೆದ್ದಾರಿಯಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ ಅವರ ಒಡೆತನದ ಪೆಟ್ರೋಲ್ ಪಂಪ್ ನ್ನು ಅಲ್ಲಿನ ಜಿಲ್ಲಾಡಳಿತ ಧ್ವಂಸಗೊಳಿಸಿದೆ.

ಶಾಜಿಲ್ ಇಸ್ಲಾಂ ಅನ್ಸಾರಿ ಅವರು ಪೆಟ್ರೋಲ್ ಪಂಪ್ ನ್ನು ಅಗತ್ಯ ಪರವಾನಿಗೆ ಇಲ್ಲದೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳು ಜೆಸಿಬಿ ಮೂಲಕ ಇಡೀ ಪಂಪ್ ನ್ನು ಕೆಡವಿದ್ದಾರೆ.

ಈ ಹಿಂದೆ ಶಾಜಿಲ್ ಇಸ್ಲಾಂ ಅವರು ಯೋಗಿ ಆದಿತ್ಯನಾಥ್ ಗೆ ಬೆದರಿಕೆ ಹಾಕುತ್ತಿರುವ ವೀಡಿಯೋ ಕ್ಲಿಪ್ ವೊಂದು ಬಿಡುಗಡೆ ಆಗಿತ್ತು. ಇದು ಸಾಕಷ್ಟು ವಿವಾದವನ್ನು ಉಂಟು ಮಾಡಿತ್ತು.