ಸತತ 11ನೇ ಬಾರಿಗೆ ಆರ್ ಬಿಐ ರೆಪೊ ದರ ಯಥಾಸ್ಥಿತಿ…

68
firstsuddi

ನವದೆಹಲಿ : ಆರ್ ಬಿಐ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ಸತತ 11ನೇ ಬಾರಿಗೆ ರೆಪೊ ದರಗಳನ್ನು ಯಥಾಸ್ಥಿತಿ ಮುಂದುವರಿಸಿದೆ.

ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾನಿಟರಿ ಪಾಲಿಸಿ ಕಮಿಟಿ ನಡೆಯಿತು. ಸಭೆ ಬಳಿಕ ವಿವರಗಳನ್ನು ನೀಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಕಳೆದ ತ್ರೈಮಾಸಿಕದ ಅವಧಿಯಲ್ಲಿದ್ದಂತೆ ರೆಪೊ ದರವನ್ನು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಮುಂದುವರಿಸಲಾಗಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಮತ್ತು ಬ್ಯಾಂಕ್ ರೇಟ್ ಗಳನ್ನೂ ಎಂಪಿಸಿ ಬದಲಿಸಿಲ್ಲ. ಇವು ಸಹ ಯಥಾಸ್ಥಿತಿಯಲ್ಲಿ, ಅಂದರೆ ಶೇ 4.25ರ ಪ್ರಮಾಣದಲ್ಲಿ ಮುಂದುವರಿಯಲಿವೆ. ಲಿಕ್ವಿಡಿಡಿ ಅಡ್ಜಸ್ಟ್ಮೆಂಟ್ ಸೌಲಭ್ಯದ ಮೂಲದರವನ್ನು ಕೊವಿಡ್ ಪಿಡುಗು ಕಾಣಿಸಿಕೊಳ್ಳುವ ಮೊದಲು ಇದ್ದ ಮಟ್ಟಕ್ಕೆ, ಅಂದರೆ 50 ಬಿಪಿಎಸ್ ಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರೆಪೊ ದರ : ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.