ನೈಟ್​ಕ್ಲಬ್​ನಲ್ಲಿ ರಾಹುಲ್ ಗಾಂಧಿ : ವೈರಲ್ ಆಯ್ತು ವಿಡಿಯೋ…

71
firstsuddi

ಕಠ್ಮಂಡು : ಇಲ್ಲಿನ ವರ್ಲ್ಡ್‌ಕ್ಲಾಸ್‌ ನೈಟ್‌ಕ್ಲಬ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಪತ್ರಕರ್ತೆಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ನೇಪಾಳಕ್ಕೆ ಆಗಮಿಸಿದ್ದರು. ಈ ವಿಡಿಯೋವನ್ನು ಕೆಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಪರ ರಣದೀಪ್ ಸುರ್ಜೇವಾಲಾ ಬ್ಯಾಟಿಂಗ್ : ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಇನ್ನೂ ಅಪರಾಧವಾಗಿಲ್ಲ. ಬಹುಶಃ ಇಂದಿನಿಂದ ಮದುವೆಗೆ ಹಾಜರಾಗುವುದು ಕಾನೂನುಬಾಹಿರ ಮತ್ತು ಸ್ನೇಹಿತರನ್ನು ಹೊಂದುವುದು ಅಪರಾಧ ಎಂದು ಬಿಜೆಪಿ ನಿರ್ಧರಿಸಬಹುದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.