ಬಾಲಿವುಡ್ ನ ನಟ ಅಮೀರ್ ಖಾನ್ ಪುತ್ರಿ ಇರಾ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಿಕಿನಿಯಲ್ಲೇ ಇರಾ ಖಾನ್ ಕೇಕ್ ಕತ್ತರಿಸುತ್ತಿದ್ದಾರೆ. ಇರಾ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅಮೀರ್ ಖಾನ್, ಇರಾ ತಾಯಿ ರೀನಾ ದತ್ತ ಮತ್ತು ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಕೂಡ ಹಾಜರಿದ್ದು, ಇರಾ ಅವರ 25ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇರಾ ಖಾನ್ ಬಿಕಿನಿಯಲ್ಲೇ ಕೇಕ್ ಕಟ್ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇರಾ ಖಾನ್ ಧರಿಸಿದ್ದ ಬಟ್ಟೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಸಮಯದಲ್ಲಾದರೂ ಸರಿಯಾದ ಬಟ್ಟೆ ಧರಿಸಬಾರದಾ ಎಂದು ಹೇಳುತ್ತಿದ್ದಾರೆ. ಅಪ್ಪನ ಮುಂದೆ ಇಂಥ ಬಟ್ಟೆ ಧರಿಸಲು ನಿಮಗೆ ಏನು ಅನ್ನಿಸುವುದಿಲ್ಲವಾ? ಎಂದು ಕೇಳಿದ್ದರು. ಇನ್ನು ಕೆಲವರು ಅವರ ಬಟ್ಟೆ ಅವರ ಇಷ್ಟ ಎಂದು ಕಾಮೆಂಟ್ ಮಾಡುವ ಮೂಲಕ ಇರಾ ಪರ ನಿಂತಿದ್ದಾರೆ. ಇರಾ ಖಾನ್ ಸ್ವಿಮಿಂಗ್ ಪೂಲ್ ಪಕ್ಕದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗಾಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕೆಲವರು ಸಪೋರ್ಟ್ ಮಾಡಿದ್ದಾರೆ.










