ಬೆಂಗಳೂರು : ಪತ್ನಿಗೆ ಕಿರುಕುಳ ನೀಡಿರುವ ಆರೋಪದಡಿಯಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸಹೋದರ ರಾಘವೇಂದ್ರ ಡಿ. ಚನ್ನಣ್ಣನವರ್ ವಿರುದ್ಧ ನಗರದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
2015ರಲ್ಲಿ ರಾಘವೇಂದ್ರ ಮತ್ತು ರೋಜಾ ಮದುವೆಯಾಗಿತ್ತು. ಆದರೆ ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆಯನ್ನು ರಾಘವೇಂದ್ರ ಮದುವೆಯಾಗಿದ್ದನ್ನು ಬಚ್ಚಿಟ್ಟಿದ್ದ ಆರೋಪ ಕೇಳಿಬಂದಿದೆ.
ಮದುವೆಯಾದ ಒಂದು ವರ್ಷದಲ್ಲೇ ನನ್ನನ್ನು ಬಿಟ್ಟು ಆ ಮಹಿಳೆ ಜೊತೆ ರಾಘವೇಂದ್ರ ಸಂಸಾರ ಶುರು ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ, ಹಲವು ಬಾರಿ ತಂದೆ ಬಳಿ ಹಣ ಪಡೆದಿದ್ದಾರೆ. ಈ ವಿಷಯವನ್ನು ರವಿ ಡಿ. ಚನ್ನಣ್ಣನವರ್ ಅವರ ಗಮನಕ್ಕೆ ತಂದಿರುವೆ. ಆದರೆ ಅವರು ಹೊಸ ಹೆಂಡತಿಯ ಜೊತೆ ಹೊಂದಿಕೊಂಡು ಹೋಗು ಎಂದು ತನಗೆ ಹೇಳಿದ್ದಾರೆ. ನನಗೆ ನ್ಯಾಯ ಬೇಕು ಎಂದು ಅವರು ರೋಜಾ ಸಲ್ಲಿಸಿದ್ದಾರೆ.










