ರೆಪೋ ದರ ಶೇ. 4.90ಕ್ಕೆ ಹೆಚ್ಚಿಸಿದ ಆರ್​ಬಿಐ.

47
firstsuddi

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮತ್ತೊಮ್ಮೆ ರೆಪೋ ದರದಲ್ಲಿ ಏರಿಕೆ ಮಾಡಿದೆ. 40 ಬೇಸಿಸ್ ಪಾಯಿಂಟ್ಸ್ ಗಳೊಂದಿಗೆ ರೆಪೋ ದರ ಶೇ. 4.90ಕ್ಕೆ ಹೆಚ್ಚಳ ಮಾಡಲಾಗಿದೆ. ರೆಪೋ ದರ ಏರಿಕೆಯಿಂದಾಗಿ ಬ್ಯಾಂಕ್‍ಗಳಲ್ಲಿನ ಗೃಹ ಸಾಲ, ವಾಹನ ಸಾಲ, ಇಎಂಐ ಕೂಡ ಹೆಚ್ಚಳವಾಗಲಿದೆ.

ಎರಡು ವರ್ಷಗಳ ಬಳಿಕ ಇದೇ ಮೊದಲ ಸಲ ರೆಪೋ ದರ ಸತತವಾಗಿ ಎರಡು ಸಲ ಏರಿಕೆ ಮಾಡಲಾಗಿದ್ದು, ರೆಪೋ ದರ ಇದೀಗ 4.4 ರಿಂದ 4.9ಕ್ಕೆ ಏರಿಕೆಯಾಗಿದೆ.

ಈ ಕುರಿತು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನಲೆಯಲ್ಲಿ ಆರ್​ಬಿಐ ಇಂದು ಪ್ರಮುಖ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‍ಗಳಿಂದ(ಬಿಪಿಎಸ್) ಶೇಕಡಾ 4.90ಕ್ಕೆ ಹೆಚ್ಚಿಸಿದೆ. ಬ್ಯಾಂಕ್ ದರವು ಶೇ. 4.65ರಿಂದ ಶೇ. 5.15ಕ್ಕೆ ಏರಿಕೆಯಾಗಿದೆ. ಸಾಂಕ್ರಾಮಿಕ ಮತ್ತು ಯುದ್ಧದ ಹೊರತಾಗಿಯೂ ಭಾರತೀಯ ಆರ್ಥಿಕ ಚೇತರಿಕೆ ವೇಗವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.