ಬೆಂಗಳೂರು : ರಾಜ್ಯಸಭೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಗೆ ಹೋಗಿ ಬಂದರು.
ಸಿದ್ದರಾಮಯ್ಯ ಕೊಠಡಿಗೆ ಹೋಗಿದ್ದ ವಿಚಾರ ಮಾತನಾಡಿ, ಈ ಹಿಂದೆ ಅದೇ ಕೊಠಡಿಗೆ ಹೋಗಿ ಅಭ್ಯಾಸ ಅದಕ್ಕೆ ಹೋಗಿದ್ದೆ. ಅಮೇಲೆ ತಪ್ಪಿ ವಾಪಸ್ ಬಂದೆ. ಇಷ್ಟು ದಿನದ ಕುತೂಹಲಕ್ಕೆ ಇವತ್ತು ತೆರೆ ಬೀಳಲಿದೆ. ಪೊಲಿಟಿಕಲ್ ಸೀಕ್ರೆಟ್ ಹೇಳುವಂತಿಲ್ಲ. ಇಬ್ಬರು ಮೆರಿಟ್ ಮೇಲೆ ಮತ್ತು ಇನ್ನಿಬ್ಬರು ಅದೃಷ್ಟದ ಮೇಲೆ ಗೆಲ್ಲಲಿದ್ದಾರೆ ಎಂದರು.
ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡ ಮತದಾನ ನಡೆದಿದೆ. ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಮತ ಹಾಕಿದ ಬಳಿಕ ನೇರವಾಗಿ ಕಾಂಗ್ರೆಸ್ ಶಾಸಕರಿದ್ದ ಕಚೇರಿಗೆ ತೆರಳಿದರು.










