ಚಿಕ್ಕಮಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಎಂಇಎಸ್ ಪದವಿ ಪೂರ್ವ ಕಾಲೇಜು ಶೇ.85 ರಷ್ಟು ಫಲಿತಾಂಶ ಗಳಿಸಿದೆ.
ಕಾಲೇಜಿನ 226 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಅವರಲ್ಲಿ 192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಅತ್ಯುನ್ನತ ಶ್ರೇಣಿಯಲ್ಲಿ 44. ಪ್ರಥಮ ದರ್ಜೆಯಲ್ಲಿ 106 ಮತ್ತು 24 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ವೈಷ್ಣವಿ ಎನ್.ರಾವ್ 589 ಅಂಕ ಗಳಿಸಿ ರಾಜ್ಯಕ್ಕೆ 8ನೇ ಸ್ಥಾನದಲ್ಲಿದ್ದರೆ ವಿಜ್ಞಾನ ವಿಭಾಗದಲ್ಲಿ ಆರ್.ಶರತ್ 584 ಮತ್ತು ಕಲಾ ವಿಭಾಗದಲ್ಲಿ ಬಿ.ಎಂ.ಭಾವನಾ 558 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ತಿಳಿಸಿದ್ದಾರೆ.










