ಅಗ್ನಿಪಥ್ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಅಜಿತ್ ದೋವಲ್.

47
firstsuddi

ನವದೆಹಲಿ : ಅಗ್ನಿಪಥ್ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದನ್ನು ರಾತ್ರಿ ಕುಳಿತು ಮಾತನಾಡಿ ಬೆಳಗಾಗುವುದರೊಳಗೆ ಘೋಷಿಸಿಲ್ಲ. ಇದು ದಶಕಗಳ ಕಾಲ ಚರ್ಚಿಸಿ, ಹಲವಾರು ತಜ್ಞರ ಸಲಹೆಯ ಆಧಾರದ ಮೇಲೆ ಜಾರಿ ಮಾಡಲಾಗಿದೆ ಎಂದು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಖಡಕ್ಕಾಗಿ ಹೇಳಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಗ್ನಿಪಥ್ ಯೋಜನೆಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ದೇಶ ಸೇವೆ ಮಾಡುವ ಪ್ರತಿಯೊಬ್ಬ ಯುವಕನ ಬಯಕೆಗೆ ಈ ಯೋಜನೆ ಪ್ರೇರಣೆ ನೀಡುತ್ತದೆ. ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಅಗ್ನಿವೀರರಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಅವರು ಸೇನೆಗೆ ಸೇರಿದ ಮೇಲೆ ಇನ್ನಷ್ಟು ಕಠಿಣ ತರಬೇತಿ ನೀಡಲಾಗುತ್ತದೆ. ಇದು ಅವರನ್ನು ಪರಿಪೂರ್ಣ ಯೋಧನನ್ನಾಗಿ ಮಾಡುತ್ತದೆ. ರೆಜಿಮೆಂಟ್ ಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ತಿಳಿಸಿದರು.