ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾದ ಭಾರತದ ಟೆಕ್ಕಿ.

70
firstsuddi

ಹೈದರಾಬಾದ್: ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ ತೆಲಂಗಾಣ ಮೂಲದ ಸಾಫ್ಟವೇರ್ ಇಂಜಿನಿಯರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸಾಯಿ ಚರಣ್(26) ಮೃತ ವ್ಯಕ್ತಿ. ಭಾನುವಾರ ಸಂಜೆ ಅಮೆರಿಕದ ಮೇರಿಲ್ಯಾಂಡ್ ನ ಕ್ಯಾಟನ್ಸ್ ವಿಲ್ಲೆ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಯಿ ಚರಣ್ ಅವರನ್ನು ಅಪರಿಚಿತನೊಬ್ಬ ಗುಂಡಿಕ್ಕಿ ಪರಾರಿಯಾಗಿದ್ದಾನೆ. ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಆದರೆ ಹತ್ಯೆ ಮಾಡಿದ ವ್ಯಕ್ತಿ ಇನ್ನೂ ಪತ್ತೆ ಆಗಿಲ್ಲ.

ಕೂಡಲೇ ಅವರನ್ನು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಆರ್. ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್ ಗೆ ಸ್ಥಳಾಂತರಿಸಲಾಯಿತು, ಆದರೆ ಚರಣ್ ತಲೆಗೆ ಗುಂಡೆಟು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಲ್ಗೊಂಡದ ನಿವೃತ್ತ ಶಿಕ್ಷಕ ನರಸಿಂಹ ಅವರ ಪುತ್ರ ಚರಣ್ ಕಳೆದ ಎರಡು ವರ್ಷಗಳಿಂದ ಬಾಲ್ಟಿಮೋರ್ ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.