ನವದೆಹಲಿ : ಇಂದು ರಾಷ್ಟ್ರೀಯ ವೈದ್ಯರ ದಿನ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ವೈದ್ಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದ ಎಲ್ಲ ವೈದ್ಯರಿಗೂ ವೈದ್ಯರ ದಿನಾಚರಣೆಯ ಶುಭಾಶಯಗಳು. ಜೀವ ಉಳಿಸುವಲ್ಲಿ ಮತ್ತು ನಮ್ಮ ಗ್ರಹವನ್ನು ಆರೋಗ್ಯಕರವಾಗಿಸುವಲ್ಲಿ ವೈದ್ಯರ ಪಾತ್ರ ಅಪಾರವಾಗಿದೆ ಎಂದಿದ್ದಾರೆ. ಇದರೊಂದಿಗೆ ವೀಡಿಯೋವೊಂದನ್ನು ಕೂಡ ಶೇರ್ ಮಾಡಿದ್ದಾರೆ.
Doctors Day greetings to all hardworking doctors who play a key role in saving lives and making our planet healthier. pic.twitter.com/5yFw2nNofV
— Narendra Modi (@narendramodi) July 1, 2022










