ಒಂದು ವಾರದೊಳಗೆ ಅಡುಗೆ ಎಣ್ಣೆ ದರ ಇಳಿಸಿ : ಕೇಂದ್ರ ಸರ್ಕಾರ ಸೂಚನೆ…

71
firstsuddi

ನವದೆಹಲಿ : ಒಂದು ವಾರದೊಳಗೆ ಅಡುಗೆ ಎಣ್ಣೆಯ ಬೆಲೆಯನ್ನು 1 ಲೀಟರ್‍ ಗೆ 10 ರೂ. ಇಳಿಸಲು ಅಡುಗೆ ಎಣ್ಣೆ ತಯಾರಿಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕಳೆದ ಕೆಲವು ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಗಣನೀಯವಾಗಿ ಇಳಿಕೆಯಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬೇಡಿಕೆಯ ಸುಮಾರು ಶೇ.56 ರಷ್ಟು ಆಮದುಗಳಿಂದ ಪೂರೈಕೆಯಾಗುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯ ಕುಸಿತವು ಸ್ಥಳೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಗಳ ಬೆಲೆ ಒಂದು ವಾರದಲ್ಲಿ ಶೇಕಡ 10ರಷ್ಟು ಇಳಿದಿದೆ. ಹೀಗಾಗಿ ಎಂಆರ್ ಪಿಯನ್ನು ಇಳಿಸಬೇಕು ಎಂದು ಹೇಳಿದ್ದೇವೆ. ಆಮದು ಮಾಡಿಕೊಳ್ಳುವ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಎಂಆರ್ ಪಿಯನ್ನು ಮುಂದಿನ ವಾರದೊಳಗೆ ಲೀಟರಿಗೆ 10ರೂ. ರವರೆಗೆ ಇಳಿಸುವುದಾಗಿ ಪ್ರಮುಖ ತಯಾರಕರು ಭರವಸೆ ನೀಡಿದ್ದಾರೆ. ಈ ಎಣ್ಣೆಗಳ ಬೆಲೆ ಇಳಿಕೆಯಾದ ನಂತರ, ಇತರ ಅಡುಗೆ ಎಣ್ಣೆಗಳ ಬೆಲೆಯಲ್ಲಿಯೂ ಇಳಿಕೆ ಆಗಲಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ತಿಳಿಸಿದ್ದಾರೆ.