ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ; ಮಲಯಾಳಂ ನಟ ಅರೆಸ್ಟ್…

64
firstsuddi

ತಿರುವನಂತಪುರಂ : ಅಪ್ರಾಪ್ತ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪದಡಿ ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದು, ನಟನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜುಲೈ 4 ರಂದು ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಅಪ್ರಾಪ್ತ ಬಾಲಕಿಯರು ನಿಂತಿದ್ದ ವೇಳೆ ತನ್ನ ಕಾರಿನಲ್ಲಿ ಕುಳಿತಿದ್ದ ಶ್ರೀಜಿತ್ ಕಾರಿನಿಂದ ಕೆಳಗಿಳಿದು ಗುಪ್ತಾಂಗವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ ನಂತರ ಪೊಲೀಸರು ರವಿ ಅವರನ್ನು ಬಂಧಿಸಿದ್ದಾರೆ.

ಶ್ರೀಜಿತ್ ರವಿ ಈ ರೀತಿ ವರ್ತಿಸಿರುವುದು ಇದೇ ಮೊದಲೇನಲ್ಲ. 2016ರಲ್ಲಿ ಪಾಲಕ್ಕಾಡ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ರವಿಯನ್ನು ಬಂಧಿಸಿದ್ದರು.