ಶೃಂಗೇರಿ ಶ್ರೀಗಳಿಗೆ ಅವಮಾನ ಮಾಡಿದ್ದ ವ್ಯಕ್ತಿಗೆ ಮೂರು ವರ್ಷ ಜೈಲು…

81
firstsuddi

ಚಿಕ್ಕಮಗಳೂರು : ಶೃಂಗೇರಿ ಶ್ರೀಗಳಿಗೆ ಅವಮಾನ ಮಾಡಿದ್ದ ವ್ಯಕ್ತಿಗೆ ಮೂರು ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಶೃಂಗೇರಿ ಕೋರ್ಟ್ ತೀರ್ಪು ನೀಡಿದೆ.

ಶೃಂಗೇರಿ ಹಿಂದೂಸ್ ಫೇಸ್ ಬುಕ್ ಪೇಜ್ ನಲ್ಲಿ ಶೃಂಗೇರಿ ಶ್ರೀ ಮಠದ ಗುರುಪರಂಪರೆ ಕುರಿತ ಮಾಹಿತಿ ನೀಡುವ ಪೋಸ್ಟ್ ಹಾಕಲಾಗಿತ್ತು. ಅದರಲ್ಲಿ ಶೃಂಗೇರಿ ಶ್ರೀಗಳ ಫೋಟೋ ಕೂಡ ಇತ್ತು. ಈ ಪೋಸ್ಟ್ ಗೆ 2015ರ ನವೆಂಬರ್ 19ರಂದು ಹುಬ್ಬಳ್ಳಿ ಮೂಲದ ಮುನ್ನಾ ಅಜರ್ ಎಂಬಾತ ಅವಾಚ್ಯ ಪದಗಳನ್ನು ಬಳಸಿ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ.

ಈ ಸಂಬಂಧ ರಾಜ್ಯದ ವಿವಿಧೆಡೆ ಶೃಂಗೇರಿ ಮಠದ ಭಕ್ತರು ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ನಂತರ ಈ ಬಗ್ಗೆ ತನಿಖೆ ಕೈಗೊಂಡ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ಕೆಲವೇ ದಿನಗಳಲ್ಲಿ ಮುನ್ನಾ ಅಜರ್ ನನ್ನ ಬಂಧಿಸಿದ್ದರು.

ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಸುಧೀರ್ ಹೆಗ್ಡೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಶೃಂಗೇರಿ ಕೋರ್ಟ್ ನ್ಯಾಯಾಧೀಶ ಕ್ರಾಂತಿಕುಮಾರ್ ಮುನ್ನಾ ಅಜರ್ ಗೆ ಶಿಕ್ಷೆ ವಿಧಿಸಿದ್ದಾರೆ.