ಮಾಧ್ಯಮಗಳು ‘ಕಾಂಗರೂ ಕೋರ್ಟ್’ ನಡೆಸುತ್ತಿವೆ : ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ.

74
firstsuddi

ರಾಂಚಿ : ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು ‘ಕಾಂಗರೂ ಕೋರ್ಟ್’ ಮಾದರಿಯ ವಿಚಾರಣೆಗಳನ್ನು ನಡೆಸುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಹೇಳಿದ್ದಾರೆ.

ರಾಂಚಿಯ ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಟಡಿ ಮತ್ತು ರಿಸರ್ಚ್ ಇನ್ ಲಾದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ ಎನ್ ವಿ ರಮಣ, ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆ ಎರಡು ಹೆಜ್ಜೆ ಹಿಂದೆ ಹೋಗುವಂತೆ ಮಾಡುತ್ತಿವೆ. ಇದ್ದುದರಲ್ಲೇ ಮುದ್ರಣ ಮಾಧ್ಯಮಗಳು ಒಂದಿಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಮಧ್ಯೆ, ಎಲೆಕ್ಟ್ರಾನಿಕ್ ಮಾಧ್ಯಮಗಳು ಜವಾಬ್ದಾರಿಯನ್ನೇ ಮರೆತಿವೆ ಎಂದರು.

ಮಾಧ್ಯಮಗಳು ಹರಡುತ್ತಿರುವ ಪಕ್ಷಪಾತದ ಅಭಿಪ್ರಾಯಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿವೆ. ಇದು ನಮ್ಮ ಸಮಾಜದ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ. ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.