ಭಾರತೀಯರೇ ಆಫ್ಘಾನ್‍ಗೆ ವಾಪಸ್​ ಬನ್ನಿ : ತಾಲಿಬಾನ್ ಮನವಿ…

81
firstsuddi

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಹೆದರಿ ದೇಶ ಬಿಟ್ಟಿದ್ದ ಭಾರತೀಯರು ಮತ್ತು ಸಿಖ್ಖರನ್ನು ಇದೀಗ ತಾಲಿಬಾನ್ ಮರಳಿ ಬರುವಂತೆ ಮನವಿ ಮಾಡಿದೆ.

ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಮುಲ್ಲಾ ಅಬ್ದುಲ್ ವಾಸಿ ಅವರು ಜುಲೈ 24 ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಸಮುದಾಯದ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ಈ ಬಗ್ಗೆ ಸರ್ಕಾರ ಟ್ವೀಟ್ ಮಾಡಿ ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲ ಭಾರತೀಯ ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು. ಏಕೆಂದರೆ ದೇಶದಲ್ಲಿ ಭದ್ರತೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿಕೊಂಡಿದೆ.

ಜೂನ್ 18 ರಂದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್ ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತ್ತು. ದಾಳಿ ವೇಳೆ ಓರ್ವ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು.