ಹರ್ ಘರ್ ತಿರಂಗಾ ರ‍್ಯಾಲಿ ವೇಳೆ ಮಾಜಿ ಡಿಸಿಎಂ ನಿತಿನ್ ಪಟೇಲ್‍ಗೆ ಗುದ್ದಿದ ದನ.

70
firstsuddi

ಗಾಂಧೀನಗರ : ಹರ್ ಘರ್ ತಿರಂಗಾ ಯಾತ್ರೆಯ ರ‍್ಯಾಲಿ ವೇಳೆ ಗುಜರಾತ್ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ಬಿಡಾಡಿ ದನವೊಂದು ದಾಳಿ ನಡೆಸಿರುವ ಘಟನೆ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

ದನ ಗುದ್ದಿದ ರಭಸಕ್ಕೆ ನಿತಿನ್ ಪಟೇಲ್ ಕೆಳಗಡೆ ಬಿದ್ದು ಕಾಲಿಗೆ ಪೆಟ್ಟಾಗಿದೆ. ಕಡಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವೇಳೆ ಈ ಘಟನೆ ನಡೆದಿದೆ. ಕರಣಪುರ ತರಕಾರಿ ಮಾರುಕಟ್ಟೆ ಬಳಿ ಯಾತ್ರೆ ನಡೆಸುತ್ತಿದ್ದರು. ಈ ವೇಳೆ ಜನರ ಮಧ್ಯೆ ನುಗ್ಗಿ ಬಂದ ದನ ನೇರವಾಗಿ ನಿತಿನ್ ಪಟೇಲ್ ಅವರಿಗೆ ಗುದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಕಾಲಿಗೆ ಗಾಯವಾಗಿದ್ದು, ನಂತರ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರು ಅಹಮದಾಬಾದ್ ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.