ಬಣಕಲ್ ವಿದ್ಯುತ್ ಸಬ್ ಸ್ಟೇಷನ್‍ಗೆ ಭೇಟಿ ನೀಡಿದ ವಿದ್ಯಾರ್ಥಿಗಳು.

69
firstsuddi

ಕೊಟ್ಟಿಗೆಹಾರ : ಅನುಭವಾತ್ಮಕ ಕಲಿಕೆ ಕಾರ್ಯಕ್ರಮದ ಅಂಗವಾಗಿ ಬಣಕಲ್ ಪ್ರೌಢಶಾಲೆಯ 353 ವಿದ್ಯಾರ್ಥಿಗಳು ಬಣಕಲ್‍ನ ನಿರ್ಮಾಣ ಹಂತದಲ್ಲಿರುವ ಬಣಕಲ್ ವಿದ್ಯುತ್ ಸಬ್ ಸ್ಟೇಷನ್ ಫೀಡರ್ ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಪಿ ವಾಸುದೇವ್, ವಿದ್ಯಾರ್ಥಿಗಳನ್ನು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತಗೊಳಿಸಿದರೆ ಅವರು ಬರಿಯ ಚೀಲಗಳಾಗುತ್ತಾರೆ. ಅವರನ್ನು ಸಮೃದ್ಧ ಪೈರು ಬೆಳೆಯುವ ಭತ್ತದ ಗದ್ದೆ ಗದ್ದೆಗಳಂತಾಗಿಸಲು ಕಲಿಕೆ ಅನುಭವಗಳ ಜತೆಯಲ್ಲಿ ಸಾಗಬೇಕು. ದೈನಂದಿನ ಜೀವನದ ಚಟುವಟಿಕೆಗಳೊಂದಿಗೆ ಕಲಿಕೆಯ ಅಂಶಗಳು ಸಮ್ಮಿಳಿತವಾಗಬೇಕು. ಸ್ವ ಅನುಭವಕ್ಕಿಂತ ದೊಡ್ಡ ಪಾಠ ಬೇರೊಂದಿಲ್ಲ ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ ಎಂದರು.

ಮೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಸೋಮಪ್ಪ ಪೂಜಾರಿ ಅವರು ಫೀಢರ್ ಕಾರ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಆ ನಂತರದಲ್ಲಿ ವಿದ್ಯಾರ್ಥಿಗಳು ಬಣಕಲ್ ಗ್ರಾ.ಪಂಗೆ ಭೇಟಿ ನೀಡಿ ಗ್ರಾ.ಪಂ ಕಾರ್ಯ ವಿಧಾನಗಳ ಬಗ್ಗೆ ಮಾಹಿತಿ ಪಡೆದರು.