ಖ್ಯಾತ ಗಾಯಕಿ, ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ…

60
firstsuddi

ಹರ್ಯಾಣದ ಖ್ಯಾತ ಗಾಯಕಿ ಮತ್ತು ಡಾನ್ಸರ್ ಸಪ್ನಾ ಚೌಧರಿ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಅವರನ್ನು ಬಂಧಿಸಲು ಯುಪಿ ಪೊಲೀಸರು ಹರ್ಯಾಣಗೆ ತೆರಳಿದ್ದಾರೆ.

ನೃತ್ಯ ಕಾರ್ಯಕ್ರಮವೊಂದನ್ನು ಒಪ್ಪಿಕೊಂಡು, ಮುಗಂಡ ಹಣ ಪಡೆದು ಕಾರ್ಯಕ್ರವನ್ನು ನೀಡದೆ ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಈ ಕಾರಣಕ್ಕಾಗಿ ಲಕ್ನೋದ ಎಸಿಜೆಎಂ ನ್ಯಾಯಾಲಯವು ಸಪ್ನಾ ಚೌಧರಿ ವಿರುದ್ಧ ಸೋಮವಾರ ಬಂಧನ ವಾರಂಟ್ ಹೊರಡಿಸಿದೆ.

ವಾಸ್ತವವಾಗಿ, ಸಪ್ನಾ ಚೌಧರಿ ಸೋಮವಾರ ವಿಚಾರಣೆಗೆ ಹಾಜರಾಗಬೇಕಿತ್ತು, ಆದರೆ ಸಪ್ನಾ ಚೌಧರಿ ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಅಲ್ಲದೇ ಪರವಾಗಿ ಯಾವುದೇ ಅರ್ಜಿಯನ್ನೂ ಸಲ್ಲಿಸಲಿಲ್ಲ. ಈ ಬಗ್ಗೆ ತೀವ್ರ ನಿಲುವು ತಳೆದ ನ್ಯಾಯಾಲಯ ಸಪ್ನಾ ಚೌಧರಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲು ಆದೇಶಿಸಿದೆ. ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಶಾಂತನು ತ್ಯಾಗಿ ಅವರು ಮುಂದಿನ ವಿಚಾರಣೆಯ ದಿನಾಂಕವನ್ನು ಸೆಪ್ಟೆಂಬರ್ 30 ಎಂದು ನಿಗದಿಪಡಿಸಿದ್ದಾರೆ. ನವೆಂಬರ್ 2021 ರಲ್ಲಿ, ಅದೇ ನ್ಯಾಯಾಲಯವು ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು, ನಂತರ ಸಪ್ನಾ ಚೌಧರಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು.

ಸಪ್ನಾ ಚೌಧರಿ ವಿರುದ್ಧ ದಾಖಲಾಗಿರುವ ಎಫ್ ಐಆರ್ ನ ಪ್ರಕಾರ, ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಿದ್ದ ಸಪ್ನಾ ಚೌಧರಿ ಆ ಒಪ್ಪಂದನ್ನು ಮುರಿದಿದ್ದಾರಂತೆ. ಅಲ್ಲದೇ, ಪಡೆದ ಹಣವನ್ನೂ ವಾಪಸ್ಸು ನೀಡಿಲ್ಲ. ಒಪ್ಪಂದ ಪ್ರಕಾರ ಅವರು ಗ್ರಾಹಕರ ಜೊತೆ ನೇರ ಸಂಪರ್ಕ ಇಟ್ಟುಕೊಳ್ಳಬಾರದು ಮತ್ತು ಒಪ್ಪಂದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎನ್ನುವ ನಿಯಮವಿತ್ತು ಎಂದು ಹೇಳಲಾಗಿತ್ತು. ಅದನ್ನು ಅವರು ಮುರಿದಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಜನಪ್ರಿಯ ಹರ್ಯಾಣದ ಗಾಯಕಿ ಸಪ್ನಾ ಚೌಧರಿ ಅವರು ಕಲಾವಿದರ ನಿರ್ವಹಣಾ ಒಪ್ಪಂದವನ್ನು ಮುರಿದಿದ್ದಾರೆ ಎಂದು ದೂರುದಾರರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಸಪ್ನಾ ಚೌಧರಿ ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ನ ಸೀಜನ್ 11 ರಲ್ಲಿ ಭಾಗವಹಿಸಿದ್ದರೆಂಬುವುದು ಉಲ್ಲೇಖನೀಯ.