ತಮ್ಮಣ್ಣ ಬೀಗಾರ್, ದಾದಾಪೀರ್ ಜೈಮನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…

37
firstsuddi

ನವದೆಹಲಿ : 2022 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಇಬ್ಬರು ಕನ್ನಡಿಗರಿಗೆ ಪ್ರಶಸ್ತಿ ದೊರೆತಿದೆ.

ಶಿರಸಿ ಸಿದ್ದಾಪುರದ ತಮ್ಮಣ್ಣ ಬೀಗಾರ್ ಅವರಿಗೆ ‘ಬಾವಲಿ ಗುಹೆ’ ಎನ್ನುವ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯ ಪ್ರಶಸ್ತಿ ದೊರೆತಿದ್ದು, ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ದಾದಪಿರ್ ಜಯ್ಮನ್ ಅವರಿಗೆ ನೀಲಕುರಂಜಿ ಕಥಾ ಸಂಕಲನಕ್ಕೆ ಕೇಂದ್ರ ಯುವ ಸಾಹಿತ್ಯ ಪ್ರಶಸ್ತಿ ದೊರೆತಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ ಪ್ರಶಸ್ತಿ 50,000 ರೂ. ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಳನ್ನು ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.