ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ವಿಜಯ್ ಮುಳಗುಂದ್‌ಗೆ ಸಿಬಿಐ ನೋಟಿಸ್ ನೀಡಿದೆ.
2020ರ ಅಕ್ಟೋಬರ್ 5ರಂದು ನಡೆದಿದ್ದ ಸಿಬಿಐ ದಾಳಿ ಸಂಬಂಧ ಇದೇ ಆಗಸ್ಟ್ 30 ರಂದು ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಿದೆ.
74.93 ಕೋಟಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ 2020ರಲ್ಲಿ ಡಿ.ಕೆ.ಶಿವಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ವೇಳೆ ವಿಜಯ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಇದೀಗ ಹಳೆ ಪ್ರಕರಣ ಸಂಬಂಧ ಸಿಬಿಐ ಡಿಕೆಶಿ ಆಪ್ತ ವಿಜಯ್ ಮುಳುಗುಂದಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಆಪ್ತನಿಗೆ ಸಿಬಿಐ ನೋಟಿಸ್ ಕೊಟ್ಟ ಬೆನ್ನಲ್ಲೇ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿದ ಪ್ರಕರಣದಲ್ಲಿ ಡಿಕೆಶಿಗೆ ಸಿಬಿಐಯಿಂದ ಮತ್ತೆ ಬುಲಾವ್ ಸಾಧ್ಯತೆಯಿದೆ.










