ಗ್ರಾಹಕರಿಗೆ ಜಿಯೋ ಗಿಫ್ಟ್ – ದೀಪಾವಳಿ ವೇಳೆಗೆ 5ಜಿ ಸೇವೆ ಲಭ್ಯ…

51
firstsuddi

ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನ 45ನೇ ವಾರ್ಷಿಕ ಸಭೆಯ ಉದ್ದೇಶಿಸಿ ಮಾತನಾಡಿರುವ ಮುಖೇಶ್ ಅಂಬಾನಿ, ವಿಶ್ವದ ಅತ್ಯಂತ ವೇಗದ 5ಜಿ ರೋಲ್ ಔಟ್ ಗೆ ಸಿದ್ಧಗೊಂಡಿದೆ. ದೀಪಾವಳಿ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಮೆಟ್ರೋ ನಗರಗಳು ಒಳಗೊಂಡಂತೆ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರಲು ರಿಲಯನ್ಸ್ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದರು.