ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ …

137

ಮೂಡಿಗೆರೆ : ಪಟ್ಟಣದ ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು .

ಮುಖ್ಯೋಪದ್ಯಾಯಿನಿ ಲೂರ್ದ್ ಮೇರಿ ಅವರ  ಮಾರ್ಗದರ್ಶನದಲ್ಲಿ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಆನಂದಿಸಿದರು.ವಿದ್ಯಾರ್ಥಿನಿ ಶ್ರೀಜೆಲ್  ಶಿಕ್ಷಕರ ದಿನಾಚರಣೆಯ ಮಹತ್ವವನ್ನು  ವಿವರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇಮ ಗಾಯತ್ರಿ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಶುಭ ಹಾಗೂ  ವಿದ್ಯಾರ್ಥಿಗಳಾದ ಖುಷಿ ಸ್ವಾಗತಿಸಿ ಚಿರಾಗ್ ವಂದಿಸಿದರು. 
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸುರೇಶ್ ಎಚ್.ಬಿ, ಗಣೇಶ್ , ನಳಂದ ಕಾಲೇಜು ಪ್ರಾಂಶುಪಾಲರಾದ ಮೋಹನ್ , ಶಿಕ್ಷಕರುಗಳಾದ  ,ಸಚಿನ್,ಸ್ವಾತಿ ,ಪಂಚಮಿ,ನೈದಿಲೆ ತಾರಿಣಿ ,ಸವಿತಾ,ಕುಬ್ರಾ, ಅಕ್ಷತಾ  ರಮ್ಯ ಸೇರಿದಂತೆ ಇತರ ಶಿಕ್ಷಕರು ಇದ್ದರು.