ಹಿರಿಯ ಅಧಿಕಾರಿಯಿಂದ ಅವಮಾನವಾಗಿದೆ ಎಂದು ಗುಂಡು ಹಾರಿಸಿಕೊಂಡ ಪೊಲೀಸ್!

73
firstsuddi

ಚಂಡೀಗಢ : ಹಿರಿಯ ಅಧಿಕಾರಿಗಳಿಂದ ಅವಮಾನವಾಗಿದೆ ಎಂದು ಆರೋಪಿಸಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಪೊಲೀಸ್ ಠಾಣೆಯೊಳಗೆ ತನ್ನ ಸರ್ವಿಸ್ ರಿವಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಸತೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.

ಹೋಶಿಯಾರ್ ಪುರದ ಹರಿಯಾಣಾ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸತೀಶ್ ಕುಮಾರ್, ಗುರುವಾರ ಪರಿಶೀಲನೆ ವೇಳೆ ತಾಂಡಾ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ ಹೆಚ್ ಒ) ಓಂಕಾರ್ ಸಿಂಗ್ ಅವರು ನನ್ನನ್ನು ನಿಂದಿಸಿದ್ದರು. ನನ್ನನ್ನು ಹೀಗೆ ಅವಮಾನಿಸುವುದಕ್ಕಿಂತ ಸುಮ್ಮನೆ ಗುಂಡು ಹಾರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ವೀಡಿಯೋದಲ್ಲಿ ನೋವು ಹೇಳಿಕೊಂಡಿದ್ದಾರೆ.

ಆತ್ಮಹತ್ಯೆ ಪ್ರಕರಣದ ನಂತರ ಎಸ್ ಹೆಚ್ ಒ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೋಶಿಯಾರ್ ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ತಾಜ್ ಸಿಂಗ್ ಚಾಹಲ್ ಅವರು, ಕಿರಿಯ ಪೊಲೀಸರಿಗೆ ಯಾವುದೇ ಸಮಸ್ಯೆ ಎದುರಾದರೂ ನನ್ನನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.