ಉಕ್ರೇನ್ ಮೇಲೆ ಮತ್ತೆ ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್.

56
firstsuddi

ಲಂಡನ್: : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೆ ಉಕ್ರೇನ್ ಮೇಲೆ ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ್ದಾರೆ. ಭಾಗಶಃ ರಷ್ಯಾ ಸೇನೆ ಯುದ್ಧಕ್ಕೆ ಸಜ್ಜುಗೊಳಿಸುವಂತೆ ಪುಟಿನ್ ಆದೇಶಿಸಿದ್ದಾರೆ.

ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಎದುರಾದರೆ ನಮ್ಮ ಜನರನ್ನು ರಕ್ಷಿಸಲು ನಾವು ಲಭ್ಯ ಇರುವ ಎಲ್ಲ ವಿಧಾನಗಳನ್ನು ಬಳಸುತ್ತೇವೆ, ಇದು ಟೊಳ್ಳು ಬೆದರಿಕೆಯಲ್ಲ ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನ ಭಾಷಣದಲ್ಲಿ ಹೇಳಿದರು.

ಯಾವುದೇ ಪುರಾವೆಗಳನ್ನು ನೀಡದೇ ಮಾಸ್ಕೋ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳ ಸಂಭಾವ್ಯ ಬಳಕೆ ಬಗ್ಗೆ ಚರ್ಚಿಸುವ ಮೂಲಕ ಪರಮಾಣು ಬ್ಲ್ಯಾಕ್ ಮೇಲ್ ನಲ್ಲಿ ತೊಡಗಿರುವ ಪಶ್ಚಿಮ ದೇಶಗಳು ರಷ್ಯಾ ನಾಶಮಾಡಲು ಸಂಚು ರೂಪಿಸುತ್ತಿವೆ. ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ಸೇರಿಕೊಂಡು ಯುಕ್ರೇನ್ ಅನ್ನು ರಷ್ಯಾದೊಳಗೆ ಮಿಲಿಟರಿ ಕಾರ್ಯಾಚರಣೆ ನಡೆಸಲು ಪ್ರೋತ್ಸಾಹಿಸುತ್ತಿವೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ರಷ್ಯಾದಲ್ಲಿಯೂ ಸಾಕಷ್ಟು ಶಸ್ತ್ರಾಸ್ತ್ರಗಳಿವೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.