ಮುಂದಿನ ವರ್ಷ ಅಕ್ಟೋಬರ್‌ನಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್ ನಿಯಮ ಜಾರಿ : ನಿತಿನ್ ಗಡ್ಕರಿ.

68
firstsuddi

ನವದೆಹಲಿ : ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಾಗಿ ಮುಂದಿನ ವರ್ಷ ಅಕ್ಟೋಬರ್ ನಿಂದ ಪ್ರಯಾಣಿಕರ ಕಾರುಗಳಿಗೆ 6 ಏರ್ ಬ್ಯಾಗ್ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಇದೇ ಅಕ್ಟೋಬರ್ 1 ರಿಂದ 8 ಆಸನಗಳು ಇರುವಂತಹ ಕಾರುಗಳಲ್ಲಿ ಕನಿಷ್ಠ 6  ಏರ್‌ಬ್ಯಾಗ್ ಗಳು ಇರಲೇಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿತ್ತು.

ಆಟೋ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿಯ ನಿರ್ಬಂಧಗಳು ಮತ್ತು ಸ್ಥೂಲ ಆರ್ಥಿಕ ಸನ್ನಿವೇಶದ ಮೇಲೆ ಅದರ ಪ್ರಭಾವವನ್ನು ಬೀರುತ್ತದೆ. ಪ್ಯಾಸೆಂಜರ್ ಕಾರ್ ಗಳಲ್ಲಿ (M-1 ವರ್ಗ) ಕನಿಷ್ಠ 6 ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು 2022ರ ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಟೋ ಕಂಪನಿಗಳು ಪ್ರಯಾಣಿಕ ವಾಹನಗಳ ವೆಚ್ಚ ಮತ್ತು ಭಿನ್ನತೆ ನೋಡದೆ ಅತ್ಯಂತ ಉನ್ನತಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವುಗಳ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.