ಇರಾನ್​ನಿಂದ ಚೀನಾಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ…

60
firstsuddi

ನವದೆಹಲಿ : ಇರಾನ್ ನಿಂದ ಚೀನಾಗೆ ಹೊರಟಿದ್ದ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಬಂದಿದೆ. ಇರಾನ್ ನ ಟೆಹ್ರಾನ್ ನಿಂದ ಚೀನಾದ ಗುವಾಂಗ್ ಝೌಗೆ ತೆರಳುತ್ತಿದ್ದ ಮಹಾನ್ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಭಾರತದ ವಾಯುಪಡೆಯ ಯುದ್ಧ ವಿಮಾನಗಳ ಭದ್ರತೆಯೊಂದಿಗೆ ಭಾರತದ ವಾಯು ಗಡಿಯನ್ನು ದಾಟಿಸಲಾಗಿದೆ.

ವಿಮಾನವು ಭಾರತದ ವಾಯು ಸೀಮೆ ಪ್ರವೇಶಿಸಿದ ಬಳಿಕ ಈ ಬಾಂಬ್ ಕರೆ ಬಂದ ಪರಿಣಾಮ, ವಿಮಾನದ ಪೈಲಟ್ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್ ಗೆ ಅನುಮತಿ ಕೇಳಿದರು. ಆದರೆ, ಭಾರತದ ಎಟಿಸಿ ಈ ವಿಮಾನಕ್ಕೆ ದೆಹಲಿ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಮಾಡಲು ಅನುಮತಿ ನಿರಾಕರಿಸಿದ್ದು, ಜೈಪುರ ಏರ್ ಪೋರ್ಟ್ ಗೆ ತೆರಳಲು ಸೂಚನೆ ನೀಡಿತು.

ಆದರೆ ಜೈಪುರ್ ನಲ್ಲಿ ಲ್ಯಾಂಡ್ ಮಾಡಲು ಪೈಲಟ್ ನಿರಾಕರಿಸಿ ಹಾರಾಟ ಮುಂದುವರಿಸಿದ ಹಿನ್ನೆಲೆ ಇರಾನ್ ವಿಮಾನಕ್ಕೆ ವಾಯು ಪಡೆಯ ಯುದ್ಧ ಪಡೆಯ ವಿಮಾನಗಳ ಮೂಲಕ ಭದ್ರತೆ ನೀಡಲಾಯಿತು. ವಿಮಾನ ಈಗ ಭಾರತದ ವಾಯುಸೀಮೆ ದಾಟಿ ಚೀನಾದೆಡೆಗೆ ಸಾಗಿದೆ. ಬಾಂಬ್ ಬೆದರಿಕೆ ನಿಜವೇ ಅಥವಾ ಹುಸಿ ಬಾಂಬ್ ಬೆದರಿಕೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.