ಹುಬ್ಬಳ್ಳಿ : ಆಸ್ತಿ ಮತ್ತು ಬಂಗಾರ ವಿಚಾರಕ್ಕೆ ಗಲಾಟೆ ನಡೆದು ಅಣ್ಣನೊಬ್ಬ ತನ್ನ ತಮ್ಮನಿಗೆ ಚಾಕು ಇರಿದಿರುವ ಘಟನೆ ನಗರದ ಕೇಶ್ವಾಪೂರದಲ್ಲಿ ನಡೆದಿದೆ.
ಸಂಜಯ್ ಬಾಕಳೆ ಎಂಬಾತ ಸಹೋದರ ಸಾಗರ್ ಬಾಕಳೆಗೆ ಚಾಕು ಇರಿದಿದ್ದಾನೆ. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಪೂಜೆಗೆ ತಮ್ಮ ಸಾಗರ್ ಬಂಗಾರ ಕೇಳಿದ್ದಕ್ಕೆ ಅಣ್ಣ ಸಂಜಯ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಸಹೋದರರ ನಡುವೆ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ಕಲಹ ನಡೆಯುತ್ತಿತ್ತು. ಸಂಜಯ್ ಹಾಗೂ ಪತ್ನಿ ಸೋನಾಲಿ ಅವರು ಆಸ್ತಿ ವಿಚಾರವಾಗಿ ನಿರಂತರ ಜಗಳವಾಡುತ್ತಿದ್ದರು. ಘಟನೆಯಿಂದ ಸಾಗರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










