ಹಿರಿಯ ನಟ ಅನಂತ್ ನಾಗ್​ಗೆ ಗೌರವ ಡಾಕ್ಟರೇಟ್.

65
firstsuddi

ಭಾರತೀಯ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಮತ್ತು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸಮ್ಮುಖದಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಸಿನಿಮಾ ರಂಗದಲ್ಲಿನ ಸಾಧನೆ ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ.

ಗೌರವ ಡಾಕ್ಟರೇಟ್ ಪದವಿ ಪಡೆದು ಮಾತನಾಡಿದ ಅನಂತ್ ನಾಗ್, ನನಗೆ ಪ್ರಶಸ್ತಿಗಳ ಬಗ್ಗೆ ಆಸೆಯಿಲ್ಲ. ನನ್ನ ಮಗಳು ಮತ್ತು ಹೆಂಡತಿ ಒತ್ತಾಯ ಮಾಡಿದರು ಅನ್ನುವ ಕಾರಣಕ್ಕಾಗಿ ಈ ಪದವಿಯನ್ನು ಒಪ್ಪಿಕೊಂಡೆ. ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಸಿನಿಮಾ ರಂಗ. ಇಂತಹ ರಂಗವನ್ನು ಬೆಳೆಸಿದವರು ಡಾ.ರಾಜ್ ಕುಮಾರ್ ಅವರು ಎಂದು ನೆನಪಿಸಿಕೊಂಡರು.