ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ, ಯುವ ಉದ್ಯಮಿ ಭರತ್ ಬಿ.ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಟೈಟಾನ್ ಬಿಸಿನೆಸ್ ಅವಾರ್ಡ್ – 2022 ಲಭಿಸಿದೆ.
ಉತ್ಪಾದನೆ ವಿಭಾಗದಲ್ಲಿ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ ಹೊರಹೊಮ್ಮಿದ್ದು 2022 ರ – ಟೈಟಾನ್ ಬಿಸಿನೆಸ್ ಅವಾರ್ಡ್ ಸೀಸನ್ 2 ರಲ್ಲಿ ಭರತ್ ವಿಜಯಿಯಾಗಿದ್ದಾರೆ. ಅಶ್ವ ಎನರ್ಜಿ ಮತ್ತು ವಾಲ್ಟಿಕ್ ಎಂಬ ಸಂಸ್ಥೆಗಳನ್ನು ಭರತ್ ಬಿ. ಬೊಮ್ಮಾಯಿ ಮುನ್ನಡೆಸುತ್ತಿದ್ದಾರೆ.
ವಿಶ್ವದಾದ್ಯಂತ ಇರುವ ಉದ್ಯಮಿ ಮತ್ತು ಸಂಸ್ಥೆಗಳ ಸಾಧನೆಯನ್ನು ಗುರುತಿಸುವ ಉದ್ದೇಶದೊಂದಿಗೆ ಟೈಟಾನ್ ಬ್ಯುಸಿನೆಸ್ ಅವಾರ್ಡ್ನ್ನು ನೀಡಲಾಗುತ್ತದೆ. ಸ್ಪರ್ಧಿಗಳನ್ನು ಮಾರುಕಟ್ಟೆಯ ಸಣ್ಣ ಮತ್ತು ದೊಡ್ಡ ಉದ್ಯಮಿಗಳು ಎಂದು ವಿಂಗಡಿಸಿದ್ದು, ಅವರು ಗಳಿಸಿದ ನಿಷ್ಪಕ್ಷಪಾತ ಶ್ರೇಷ್ಠತೆ ಮಟ್ಟದಿಂದ ಮಾತ್ರ ಗೌರವಿಸಲಾಗುತ್ತದೆ. ಈ ಹಂತದಲ್ಲಿ ಅರ್ಹತೆ ಪಡೆದವರು ಮಾತ್ರ ಗೌರವಾನ್ವಿತ ಟೈಟನ್ ಗಳಾಗಬಹುದು.










