ಇಂದು ಚಿತ್ರದುರ್ಗಕ್ಕೆ ಪ್ರವೇಶಿಸಲಿದೆ ಭಾರತ್ ಜೋಡೋ ಯಾತ್ರೆ…

65
firstsuddi

ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಇಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗಡಿಭಾಗದಿಂದ ಚಿತ್ರದುರ್ಗಕ್ಕೆ ಪ್ರವೇಶಿಸಲಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಇದಾಗಿದೆ. ರಾಜ್ಯದಲ್ಲೂ ಈ ಯಾತ್ರೆ ಅಕ್ಟೋಬರ್ 14ರ ವರೆಗೆ ಸಾಗಲಿದ್ದು ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಮೂಲಕ ಬಳ್ಳಾರಿ ತಲುಪಲಿದೆ.

ಇನ್ನು ತುಮಕೂರಿನಲ್ಲಿ ಪಾದಯಾತ್ರೆ ವೇಳೆ, ರಾಹುಲ್ ಗಾಂಧಿ ಕಾಂಗ್ರೆಸ್ ಬಾವುಟ ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಓಡಿದ್ದಾರೆ.

ಮೊನ್ನೆಯಷ್ಟೇ ಸಿದ್ದರಾಮಯ್ಯ ಜೊತೆ ಓಡಿದ್ದ ರಾಹುಲ್ ಗಾಂಧಿ, ಇಂದು ಬಸವನಗುಡಿ ಬಳಿ ಡಿಕೆ ಶಿವಕುಮಾರ್ ಕೈ ಹಿಡಿದುಕೊಂಡು ಹೈಸ್ಪೀಡ್ ರನ್ನಿಂಗ್ ಮಾಡಿದ್ದಾರೆ. ರಾಹುಲ್ ಗಾಂಧಿ ಸ್ಪೀಡ್ ಗೆ ಓಡದ ಡಿಕೆಶಿ ಸ್ವಲ್ಪ ದೂರ ಓಡಿ ಸುಸ್ತಾಗಿ ಬಳಿಕ ನಡೆದುಕೊಂಡು ಪಾದಯಾತ್ರೆ ಮುಂದುವರೆಸಿದ್ದಾರೆ.