ಜೈಪುರ : ಬೇರೆಯವರೊಂದಿಗೆ ಲೈಂಗಿಕ ಕ್ರಿಯೆ (ವೈಫ್ ಸ್ವಾಪಿಂಗ್ ಗೇಮ್) ನಡೆಸಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಪತಿಯಿಂದಲೇ ದೌರ್ಜನ್ಯಕ್ಕೊಳಗಾದ ಘಟನೆ ರಾಜಸ್ಥಾನದ ಬಿಕಾನೇರ್ ನಲ್ಲಿರುವ ಹೋಟೆಲ್ ರೂಮ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಭೋಪಾಲ್ ನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಿಕಾನೇರ್ ನ 5-ಸ್ಟಾರ್ ಹೋಟೆಲ್ ನಲ್ಲಿ ಮ್ಯಾನೇಜರ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಪತಿ ಅಮ್ಮರ್ ಹೋಟೆಲ್ ಕೋಣೆಯಲ್ಲಿ ತನ್ನನ್ನು ಲಾಕ್ ಮಾಡಿ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದನು. ಬಳಿಕ ಎರಡು ದಿನಗಳ ನಂತರ ಅಮ್ಮರ್ ಕುಡಿದ ಅಮಲಿನಲ್ಲಿ ಮತ್ತೆ ಬಿಕಾನೇರ್ ಬಂದನು. ಅಮ್ಮರ್ ಮದ್ಯಪಾನ, ಮಾದಕ ದ್ರವ್ಯ ವ್ಯಸನನಾಗಿದ್ದ. ಅಲ್ಲದೇ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು. ಹುಡುಗಿಯರಷ್ಟೇ ಅಲ್ಲದೇ ಹುಡುಗರೊಂದಿಗೂ ಲೈಂಗಿಕ ಕ್ರಿಯೆ ನಡೆಸುವುದು ಅವನಿಗೆ ಸಾಮಾನ್ಯವಾಗಿತ್ತು. ನನಗೂ ಬೇರೆಯವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ನಿರಾಕರಿಸಿದ ಹಿನ್ನೆಲೆ ನನ್ನ ಮೇಲೆ ಹಲ್ಲೆಗೈದು, ಸಂಸ್ಕಾರ ಇಲ್ಲದವಳು ಎಂದು ನಿಂದಿಸಿದನು ಮತ್ತು ನನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದನು ಎಂದು ಸಂತ್ರಸ್ತೆ ದೂರಿದ್ದಾರೆ.
ತನ್ನ ಪತಿಯೊಂದಿಗೆ ಅತ್ತೆ ಮತ್ತು ಅತ್ತಿಗೆ ಇಬ್ಬರೂ 50 ಲಕ್ಷ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಹಲವಾರು ತಿಂಗಳಿಂದ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ನನ್ನ ಪತಿ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆರೋಗ್ಯ ಹದಗೆಟ್ಟಿತು. ಹೀಗಾಗಿ ಆತನ ಸಂಬಂಧಿಕರು ನನ್ನ ತಾಯಿ ಮನೆಗೆ ಕರೆದೊಯ್ದರು. ಇದಾದ ಬಳಿಕ ಪತಿ ವಿರುದ್ಧ ದೂರು ನೀಡುತ್ತಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 377, 498ಎ, 323, 506, 34, 3/4 ಅಡಿಯಲ್ಲಿ ಆರೋಪಿ ಪತಿ ಮತ್ತು ಆತನ ತಾಯಿ ಹಾಗೂ ಅತ್ತಿಗೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆ ಪ್ರಭಾರಿ ಅಂಜನಾ ಧುರ್ವೆ ತಿಳಿಸಿದ್ದಾರೆ.










