ಕುಟುಂಬ ಸಮೇತ ಕಾಂತಾರ ಸಿನಿಮಾ ವೀಕ್ಷಿಸಿದ ವೀರೇಂದ್ರ ಹೆಗ್ಗಡೆ.

60
firstsuddi

ಮಂಗಳೂರು : ನಿನ್ನೆ ರಾತ್ರಿ ಮಂಗಳೂರಿನ ಭಾರತ್ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ವೀಕ್ಷಣೆ ಬಳಿಕ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂತಾರದಲ್ಲಿ ದೈವಾರಾಧನೆಯನ್ನು ರಿಷಬ್ ಶೆಟ್ಟಿ ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ದೈವಗಳು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ ಎನ್ನುವುದು ಈ ಸಿನಿಮಾದ ಸಂದೇಶ. ಇದು ಒಳ್ಳೆಯ ಸಂದೇಶ ಅಂತ ಅನಿಸಿದೆ ಎಂದು ಹೆಗ್ಗಡೆಯವರು ಹೇಳಿದರು.

ಕಾಂತಾರ ಚಿತ್ರ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ನೋಡಿದ ಬಳಿಕ ಕಾಂತಾರ ಮೂಡ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕಲಾವಿದರು, ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಮ್ಮ ನಂಬಿಕೆ ಆಚರಣೆಗಳು ಸ್ವಾಭಾವಿಕವಾಗಿ ಬೆಳೆದು ಬಂದದ್ದು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ನಾವೆಲ್ಲ ಇವತ್ತಿಗೂ ದೈವಾರಾಧನೆ ಮಾಡುತ್ತೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ. ದೈವ ಮೈಮೇಲೆ ಬಂದಾಗ ಅದಕ್ಕೆ ಗೌರವ ಕೊಡುತ್ತೇವೆ. ಇದನ್ನು ಹಿಂದೂ ಧರ್ಮಕ್ಕೆ ವಿಮರ್ಶೆ ಮಾಡುವ ಅಗತ್ಯ ಇಲ್ಲ ಎಂದು ಎಂದಿದ್ದಾರೆ.