ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ್ರಾ ಸ್ವಾಮೀಜಿ.. ಮೂರು ಪುಟಗಳ ಡೆತ್​ನೋಟ್​ನಲ್ಲೇನಿದೆ?

66
firstsuddi

ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೆತ್ ನೋಟ್ ಪತ್ತೆಯಾಗಿದೆ.

ಬಸವಲಿಂಗ ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಮಠದ ತಮ್ಮ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​ನೋಟ್​ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರು ಸಹಾಯಕ್ಕೆ ಇರಲಿಲ್ಲ. ಕೆಲವರು ಬೆದರಿಕೆ ಹಾಕಿದ್ದಾರೆ ಅಂತಾ ಡೆತ್​ನೋಟ್​ನಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಡೆತ್ ನೋಟ್ ಕುದೂರು ಪೊಲೀಸರ ಕೈ ಸೇರಿದ್ದು, ಪೊಲೀಸರ ತನಿಖೆ ಬಳಿಕ ಡೆತ್ ನೋಟ್ ರಹಸ್ಯ ಬಹಿರಂಗವಾಗಲಿದೆ.

ಶ್ರೀಗಳು 1 ರಿಂದ 8ನೇ ತರಗತಿವರೆಗೂ ಬಂಡೆಮಠದಲ್ಲೇ ವಿದ್ಯಾಭ್ಯಾಸ ಮಾಡಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಿದ್ದಗಂಗಾ ಮಠಕ್ಕೆ ತೆರಳಿದ್ದರು. ಶ್ರೀಗಳು ಮಠದಲ್ಲೇ ವೇದ, ಉಪನಿಷತ್, ವಿದ್ವತ್ ವ್ಯಾಸಂಗ ಮಾಡಿದ್ದರು. ಸ್ವಾಮೀಜಿಗಳ ಹೆಸರಲ್ಲಿ 80 ಎಕರೆ ಜಮೀನು ಇದೆ. ಬಂಡೆಮಠದಲ್ಲಿ ಮರಿಸ್ವಾಮಿಗಳಾಗಿ 2 ವರ್ಷದ ನಂತರ 25 ವರ್ಷಗಳ ಹಿಂದೆ ಪೀಠ ಅಲಂಕರಿಸಿದ್ದರು. ಬಂಡೆಮಠದ ಆವರಣದಲ್ಲಿ ಮಧ್ಯಾಹ್ನ 3:30 ನಂತರ ಲಿಂಗಾಯತ ಸಂಪ್ರದಾಯದಂತೆ ಸ್ವಾಮೀಜಿಯವರ ಅಂತ್ಯಸಂಸ್ಕಾರ ನಡೆಯಲಿದೆ.